ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಧರ್ಮದಂಗಲ್ ಭಾರೀ ಸದ್ದು ಮಾಡುತ್ತಿದೆ. ಆರೋಪ, ಪ್ರತ್ಯಾರೋಪಗಳ ಸುರಿಮಳೆಯೇ ಹರಿದುಬರುತ್ತಿದೆ. ಈ ನಡುವೆ ಶಬ್ದ ಮಾಲಿನ್ಯ ಮಾಡುತ್ತಿದ್ದ ಮಸೀದಿಗಳು ಹಾಗೂ ಬಾರ್ ರೆಸ್ಟೊರೆಂಟ್‍ಗಳ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
Advertisement
Advertisement
ಇತ್ತೀಚೆಗಷ್ಟೇ ಮಸ್ಲಿಮರು ಮಸೀದಿಗಳಲ್ಲಿ ಆಜಾನ್ ಕೂಗ ಬಾರದು. ಆಜಾನ್‍ಯಿಂದ ಶಬ್ದ ಮಾಲಿನ್ಯವಾಗುತ್ತಿದ್ದು, ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಹೀಗಾಗಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸಬಾರದು. ಪ್ರತಿದಿನ ಮುಂಜಾನೆ ಮಸೀದಿಗಳಲ್ಲಿ ಮೈಕ್ ಹಾಕಿ ಆಜಾನ್ ಕೂಗುವುದು ಸರಿಯಲ್ಲ. ಅಲ್ಲದೇ ಕಾನೂನನ್ನು ಗೌರವಿಸದೆ ಆಜಾನ್ ಕೂಗಿದರೆ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಹೀಗಾಗಿದ್ದರೂ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ರಾಮನವಮಿಯಂದು ಖಾರ್ಗೋನ್‌ನಲ್ಲಿ ಹಿಂಸಾಚಾರ – ಐವರ ಬಂಧನ
Advertisement
Advertisement
ಈ ಧರ್ಮ ದಂಗಲ್ ಪ್ರಾರಂಭ ಆದ ಮೇಲೆ ಮತ್ತಷ್ಟು ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸರು ಮಂದಿರ, ಮಸೀದಿ ಸೇರಿದಂತೆ ನೂರಾರು ನೋಟಿಸ್ ನೀಡಿದರು. ಆದರೆ ನೋಟಿಸ್ ನೀಡಿಯೂ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಇದೀಗ ಪೊಲೀಸರು ಎಫ್‍ಐಆರ್ ಮಾಡಿದ್ದಾರೆ. ಅದರಂತೆ 14 ಮಸೀದಿಗಳ ಮೇಲೆ ಎಫ್‍ಐಆರ್ ಮಾಡಿದ್ದು, 4 ಪಬ್ ಅಂಡ್ ರೆಸ್ಟೋರೆಂಟ್‍ಗಳ ಮೇಲೆ ಕೂಡ ಎಫ್‍ಐಆರ್ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಒಂದಷ್ಟು ಪ್ರದೇಶದಲ್ಲಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ – ಜಿಲ್ಲಾ ಪಂಚಾಯತ್ ಪತ್ರವೇ ನಕಲು