– ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಗಲಾಟೆ
ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ ರವಿ (CT Ravi) ದ್ವೇಷ ಭಾಷಣ ಮಾಡಿದ್ದಕ್ಕೆ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಎಫ್‌ಐಆರ್ (FIR) ಹಾಕಿರೋದನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.
ಸಿ.ಟಿ ರವಿ ಮೇಲೆ ಎಫ್‌ಐಆರ್ ಆಗಿರೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ ರವಿ ಅವರ ಮಾತು ಕೇಳಿದ್ದೇನೆ. ತೊಡೆ ಮುರಿಯೋದು, ತಲೆ ತೆಗೆಯೋದು ಅಂತೆಲ್ಲ ಮಾತಾಡಿದ್ದಾರೆ. ರವಿ ಅವರು ಸಚಿವರಾಗಿದ್ದವರು,ಶಾಸಕರು. ಅಂತಹವರ ಬಾಯಿಂದ ಇಂತಹ ಪದ ಬಳಕೆ ಸರಿನಾ? ಜನರೇ ಇದನ್ನ ತೀರ್ಮಾನ ಮಾಡಲಿ. ಹಾಗೆ ದ್ವೇಷ ಭಾಷಣ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಅದರಲ್ಲಿ ತಪ್ಪೇನು ಎಂದು ಎಫ್‌ಐಆರ್ ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಸಿ.ಟಿ ರವಿ ಸಂಸ್ಕೃತಿ ಬಗ್ಗೆ ಜನರಿಗೆ ಗೊತ್ತಿದೆ – ಡಿಕೆಶಿ
ಇದೇ ವೇಳೆ ಸಿಎಂ ಪಾಕಿಸ್ತಾನ ಹೋಗಲಿ ಎಂಬ ವಿಪಕ್ಷ ನಾಯಕ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಶೋಕ್ ಹೀಗೆ ಮಾತಾಡೋದು ಸರಿಯಲ್ಲ. ಅವರ ಹೇಳಿಕೆ ವಿಪಕ್ಷ ನಾಯಕನ ಸ್ಥಾನಕ್ಕೆ ಗೌರವ ತರೋದಿಲ್ಲ. ಪ್ರಧಾನಿ ಮೋದಿ ಅವರು ಅಹ್ವಾನ ಇಲ್ಲದೆ ಪಾಕಿಸ್ತಾನಕ್ಕೆ ಹೋದರು, ಯಾಕೆ ಹೋದ್ರು? ಆಪರೇಷನ್ ಸಿಂಧೂರದಲ್ಲಿ ಇಡೀ ದೇಶ ಮೋದಿ ಪರ ಇತ್ತು. ಆದರೆ ಇವರು ರಾತ್ರೋರಾತ್ರಿ ಯುದ್ಧ ನಿಲ್ಲಿಸಿದ್ರು. ಪಾಕಿಸ್ತಾನವನ್ನ ಭೂಪಟದಲ್ಲಿ ಇಲ್ಲದಂತೆ ಮಾಡಬಹುದಿತ್ತು. ಯಾಕೆ ಮಾಡಲಿಲ್ಲ? ಅಶೋಕ್ ಹೀಗೆ ಮಾತಾಡೋದು ಸರಿಯಲ್ಲ. ಅಶೋಕ್ ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್ ಹಿಂದುತ್ವ – ಸಿಟಿ ರವಿ
ಮುಂದಿನ 10 ವರ್ಷ ಬಿಜೆಪಿ ಅಧಿಕಾರದಲ್ಲಿ ಇರುತ್ತೆ ಎಂಬ ಅಶೋಕ್ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಬಿಜೆಪಿ ಇನ್ನು 10 ವರ್ಷ ವಿಪಕ್ಷದಲ್ಲೇ ಇರುತ್ತದೆ. ಕೇಂದ್ರದಲ್ಲೂ ಬಿಜೆಪಿ ವಿಪಕ್ಷಕ್ಕೆ ಬರಲಿದೆ. ಬಿಜೆಪಿಯವರಿಗೆ ಅಧಿಕಾರ ಮಾತ್ರ ಮುಖ್ಯ. ನಾವು ಜನರ ಕೆಲಸ ಮಾಡುತ್ತೇವೆ. ಬಿಜೆಪಿ ಅವರು ಧರ್ಮ, ದೇವರ ಹೆಸರಿನಲ್ಲಿ ಮತ ಕೇಳುತ್ತಾರೆ. 10 ವರ್ಷ ಬಿಜೆಪಿ ಅವರು ವಿಪಕ್ಷದಲ್ಲಿ ಇರುತ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ – ಸಿ.ಟಿ ರವಿ ವಿರುದ್ಧ ಕೇಸ್ ದಾಖಲು
ಇನ್ನು ಮದ್ದೂರು ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಬೆನ್ನಲ್ಲೇ ಈ ನೆಪ ಇಟ್ಟುಕೊಂಡು ಬಿಜೆಪಿ ಮದ್ದೂರಿನಂತಹ ಘಟನೆಗಳನ್ನ ಮಾಡಿಸುತ್ತಿದ್ದಾರೆ. ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ಮಾಡಿದರು. ಈಗಾಗಲೇ ಕಲ್ಲು ಹೊಡೆದವರ ಮೇಲೆ ಕೇಸ್ ಹಾಕಲಾಗಿದೆ. ಕಾನೂನು ಪ್ರಕಾರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಬಿಜೆಪಿ ಎಲ್ಲಾದರೂ ಇಂತಹ ಘಟನೆ ಆಗಲಿ ಅಂತ ಕಾಯುತ್ತಿರುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೀದರ್‌ನಲ್ಲಿ ಧಾರಾಕಾರ ಮಳೆ – ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಸ್ವಾತಂತ್ರ‍್ಯ ಮುಂಚೆಯೂ ಕೋಮು ಗಲಭೆಗಳು ಆಗಿತ್ತು. ಈಗ ಮದ್ದೂರಿನಲ್ಲಿ ಬಿಜೆಪಿ ಅವರು ಬೆಂಕಿಗೆ ತುಪ್ಪ ಹಾಕೋ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡೋ ಕೆಲಸ ಮಾಡುತ್ತಿದ್ದಾರೆ. ಕಲ್ಲು ಹೊಡೆದವರ ಮೇಲೆ ಕ್ರಮ ಆಗದೇ ಇದ್ದರೆ ಬಿಜೆಪಿ ಮಾತಾಡಬಹುದಿತ್ತು. ಬಾನು ಮುಷ್ತಾಕ್ ಅವರನ್ನ ದಸರಾಗೆ ಕರೆಯಬಾರದು ಅಂತ ಇಂತಹ ವಿಷಯ ಶುರುವಾಗಿದೆ. 1924ರಲ್ಲಿ ಒಡೆಯರ್ ಅವರು ಮಿರ್ಜಾ ಇಸ್ಮಾಯಿಲ್ ಅವರನ್ನ ಕೂರಿಸಿಕೊಂಡು ದಸರಾ ದಲ್ಲಿ ಭಾಗಿಯಾಗಿದ್ರು. ಆಗ ಮೈಸೂರು, ಮಂಡ್ಯ ಬೆಂಗಳೂರಿನಲ್ಲಿ ಗಲಾಟೆ ಮಾಡಿಸಿದ್ದರು. ಈಗ ಬಾನು ಮುಷ್ತಾಕ್ ನೆಪ ಇಟ್ಟುಕೊಂಡು ಬಿಜೆಪಿ ಗಲಾಟೆ ಮಾಡಿಸುತ್ತಿದ್ದಾರೆ. ಇದು ಖಂಡನೀಯ. ಬಿಜೆಪಿ ಅವರು ಬೆಂಕಿ ಹಚ್ಚೋ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೇಪಾಳದಲ್ಲಿ ಸಿಲುಕಿದೆ ಹೊಸಪೇಟೆಯ ಕುಟುಂಬ