ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜರುದ್ದೀನ್ ಹಾಗೂ ಇನ್ನಿಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಅಜರುದ್ದೀನ್ ಹಾಗೂ ಇನ್ನಿಬ್ಬರು ಬರೋಬ್ಬರಿ 20.96 ಲಕ್ಷ ವಂಚಿಸಿದ್ದಾರೆ ಎಂದು ಟ್ರಾವೆಲ್ ಏಜೆಂಟ್ ಮೊಹಮ್ಮದ್ ಶಹಾಬ್ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಜರುದ್ದೀನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಮೊಹಮ್ಮದ್ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಅಜರುದ್ದೀನ್ ಅವರ ಪಿಎ ಮುಜಿಬ್ ಖಾನ್ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಅಜರುದ್ದೀನ್ ಹಾಗೂ ಮತ್ತೆ ಕೆಲವರ ಹೆಸರಿನಲ್ಲಿ 20.96 ಲಕ್ಷ ಮೊತ್ತದ ಹಲವು ಇಂಟೆರ್ ನ್ಯಾಷನಲ್ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಬುಕ್ ಮಾಡಿದ ಬಳಿಕ ಆನ್‍ಲೈನ್‍ನಲ್ಲಿ ಪೇಮೆಂಟ್ ಮಾಡುವುದಾಗಿ ಹೇಳುತ್ತಿದ್ದರು. ಆದರೆ ಇದುವರೆಗೂ ಯಾವುದೇ ಹಣ ನನಗೆ ಸಿಕ್ಕಿಲ್ಲ ಎಂದು ಡ್ಯಾನೀಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ ಮಾಲೀಕರಾಗಿರುವ ಮೊಹಮ್ಮದ್ ಶಾಹಬ್ ಆರೋಪಿಸಿದ್ದಾರೆ.
Advertisement
ದೂರಿನಲ್ಲಿ ಶಹಾಬ್, ನಾನು ಪೇಮೆಂಟ್ ಬಗ್ಗೆ ಕೇಳುತ್ತಿದ್ದಾಗ ಮುಜಿಬ್ ಸಹದ್ಯೋಗಿ ಸುದೇಶ್ ಅವಕ್ಕಲ್ 10.6 ಲಕ್ಷ ರೂ. ವರ್ಗಾಯಿಸಿದ್ದೇನೆ ಎಂದು ಇಮೇಲ್ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಹಣ ಸಿಗಲಿಲ್ಲ. ನವೆಂಬರ್ 24ರಂದು ಸುದೇಶ್ ಚೆಕ್ ನೀಡುತ್ತಿರುವ ಫೋಟೋವನ್ನು ಶಹಾಬ್‍ಗೆ ಕಳುಹಿಸಿದ್ದರು. ಬಳಿಕ ನವೆಂಬರ್ 29ರಂದು ಮಜಿಬ್ ಕೂಡ ಇದೇ ರೀತಿ ಮಾಡಿದರು. ಶಹಾಬ್‍ಗೆ ಇದುವರೆಗೂ ಯಾವುದೇ ಚೆಕ್ ಸಿಗಲಿಲ್ಲ.
Advertisement
ಶಹಾಬ್ ಬುಧವಾರ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ಅಜುರುದ್ದೀನ್, ಮುಜಿಬ್ ಖಾನ್ ಹಾಗೂ ಸುದೇಶ್ ಅವಕ್ಕಲ್ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮೂವರ ವಿರುದ್ಧ ಐಪಿಸಿ ಸೆಕ್ಷನ್ 420(ವಂಚನೆ), 406(ನಂಬಿಕೆ ದ್ರೋಹ) ಹಾಗೂ 34(ಒಂದೇ ಉದ್ದೇಶದಿಂದ ಅನೇಕ ವ್ಯಕ್ತಿಗಳಿಂದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಈ ಆರೋಪಗಳನ್ನು ಅಜರುದ್ದೀನ್ ತಳ್ಳಿ ಹಾಕಿದ್ದಾರೆ.
I strongly rubbish the false FIR filed against me in Aurangabad. I’m consulting my legal team, and would be taking actions as necessary pic.twitter.com/6XrembCP7T
— Mohammed Azharuddin (@azharflicks) January 22, 2020