ಬುಡಕಟ್ಟು ಸಮುದಾಯದ ವೇಷ ಭೂಷಣ ತೊಟ್ಟು ಅಪಹಾಸ್ಯ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಾಲಿವುಡ್ ನ ವಿವಾದಿತ ತಾರೆ ರಾಕಿ ಸಾವಂತ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಸದಾ ವಿವಾದಿಂದಲೇ ಸುದ್ದಿ ಆಗುವ ಈ ನಟಿ ವಿರುದ್ಧ ರಾಂಚಿಯಲ್ಲಿ ದೂರನ್ನು ದಾಖಲಿಸಲಾಗಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ
ವಾರಕ್ಕೊಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುವ ರಾಕಿಗೆ ಈ ಬಾರಿ ಸರಿಯಾಗಿ ಬುದ್ಧಿ ಕಲಿಸಲೇಬೇಕೆಂದು ನಿರ್ಧರಿಸಿರುವ ಅಜಯ್ ಠಾಕ್ರೆ ಎಂಬುವವರು ಈ ದೂರು ನೀಡಿದ್ದು, ದೂರಿನಲ್ಲಿ ‘ರಾಕಿ ಬುಡಕಟ್ಟು ವೇಷಭೂಷಣಕ್ಕೆ ಅಪಮಾನ ಮಾಡಿದ್ದಾರೆ. ಅದನ್ನೂ ಅವರು ಅರೆನಗ್ನ ರೀತಿಯಲ್ಲಿ ಹಾಕಿಕೊಂಡಿದ್ದಾರೆ. ಇದರಿಂದ ನಮ್ಮ ಸಮುದಾಯದ ಮಹಿಳೆಯರಿಗೆ ಅವಮಾನ ಆಗಿದೆ. ನಾವು ಗೌರವಿಸುವ ಸಂಪ್ರದಾಯಕ್ಕೆ ಧಕ್ಕೆ ತರುವಂತಹ ಕೆಲಸವನ್ನು ರಾಕಿ ಮಾಡಿದ್ದಾರೆ. ಹಾಗಾಗಿ ಸೂಕ್ತ ಕ್ರಮ ತಗೆದುಕೊಳ್ಳಬೇಕೆಂದು’ ದೂರಿನಲ್ಲಿ ಬರೆಯಲಾಗಿದೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ
ಈ ಹಿಂದೆ ರಾಕಿ ಸಾವಂತ್ ಬುಡಕಟ್ಟು ಮಹಿಳೆಯರ ವೇಷಭೂಷಣ ಧರಿಸಿ ವಿಡಿಯೋ ಮಾಡಿದ್ದರು ಅದನ್ನು ಇನ್ಸ್ಟಾದಲ್ಲಿ ಹಾಕಿದ್ದರು. ಈ ವಿಡಿಯೋನೇ ಅಜಯ್ ಠಾಕ್ರೆ ಅವರ ಕಂಗೆಣ್ಣಿಗೆ ಗುರಿ ಮಾಡಿಸಿದೆ. ಎಫ್.ಐ.ಆರ್ ದಾಖಲಿಸುವಂತೆ ಮಾಡಿದೆ.