ರಾಮನಗರ: ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯದಲ್ಲಿ ಬಲವಂತವಾಗಿ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಲಂಬಾಣಿ ತಾಂಡ್ಯ ಗ್ರಾಮಕ್ಕೆ ತುಳಸಿದಾಸ್ ಅಲಿಯಸ್ ಯೇಸುದಾಸ್ ಮತ್ತು ಆತನ ಪತ್ನಿ ದೇವಿ ಅಲಿಯಾಸ್ ಮೇರಿ ಕಳೆದ 8 ವರ್ಷಗಳ ಹಿಂದೆ ಬಂದು ನೆಲೆಸಿದ್ದರು. ಮೊದಲು ನಾಯಕ ಜನಾಂಗದವರಾಗಿದ್ದ ಅವರು ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರು.
Advertisement
Advertisement
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಯೇಸುದಾಸ್ ಹಾಗೂ ಮೇರಿ ಸೇರಿ ಊರಿನಲ್ಲಿರುವ ಪ್ರತಿ ಮನೆಗೂ ತೆರಳಿ, ಅವರನ್ನು ಮತಾಂತರವಾಗುವಂತೆ ಪ್ರತಿನಿತ್ಯವೂ ಬಲವಂತ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೇ ನೀವು ಮತಾಂತರವಾದರೆ ನಿಮ್ಮನ್ನು ಸಿರಿವಂತರಾಗಿ ಮಾಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು. ಇದನ್ನೂ ಓದಿ: ಕೋರ್ಟ್ ಮುಂದೆಯೇ ರೌಡಿಶೀಟರ್ ಮೇಲೆ ಅಟ್ಯಾಕ್ – ದುಷ್ಕರ್ಮಿಗಳನ್ನು ಹಿಡಿದು ಠಾಣೆಗೆ ದಬ್ಬಿದ ಪೊಲೀಸ್ರು
Advertisement
ಅಷ್ಟೇ ಅಲ್ಲದೇ ಮತಾಂತರಕ್ಕೆ ನಿರಾಕರಿಸಿದವರಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದು, ಮತಾಂತರ ಆಗಲಿಲ್ಲ ಅಂದರೆ ನೀವು ಈ ಊರಿನಲ್ಲಿ ಹೇಗೆ ಬದುಕುತ್ತೀರಿ ನೋಡ್ತಿವಿ ಎಂದು ಬೆದರಿಸುತ್ತಿದ್ದಾರೆ. ಈ ಬಗ್ಗೆ ಲಂಬಾಣಿ ತಾಂಡ್ಯದ ವೆಂಕಟೇಶ್, ಸುರೇಶ್ ಸೇರಿದಂತೆ ಗ್ರಾಮಸ್ಥರೆಲ್ಲರೂ ಜೊತೆಗೂಡಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನನ್ವಯ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ