ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದಂದು ಕ್ಲಬ್ ಹೌಸ್‌ನಲ್ಲಿ ಕಿಡಿಗೇಡಿಗಳ ಗುಂಪೊಂದು ಪಾಕ್ ಧ್ವಜ ಹಾಕಿ ಉದ್ಧಟತನ ಪ್ರದರ್ಶಿಸಿದೆ.
ಪಾಕಿಸ್ತಾನ ಜಿಂದಾಬಾದ್, ಭಾರತಕ್ಕೆ ನಿಂದನೆ ಮಾಡುವ ಕಾಮೆಂಟ್‌ಗಳನ್ನ ಕನ್ನಡದಲ್ಲಿ ಹಾಕಿ ವಿಕೃತಿ ಮೆರೆದಿದ್ರು. ಪಾಕಿಸ್ತಾನದ ರಾಷ್ಟ್ರಗೀತೆ ಸಹ ಅಪ್ಲೋಡ್ ಮಾಡಿದ್ರು, ನಮ್ಮನ್ನ ಏನೂ ಮಾಡೋಕೆ ಆಗಲ್ಲ ಅಂತ ಜಂಬ ಮೆರೆದಿದ್ದಾರೆ. ಇದೀಗ ಕಿಡಿಗೇಡಿಗಳ ವಿರುದ್ಧ ಐಪಿಸಿ 353A ಅಡಿ ಸಂಪಿಗೆಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಕಿಡಿಗೇಡಿಗಳ ಎಸ್ಕೇಪ್ ಆಗಿದ್ದು ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಜನರನ್ನು ದಾರಿ ತಪ್ಪಿಸಬೇಡಿ: ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ಕಿಡಿ
ಆಜಾನ್ ಸಮರಕ್ಕೆ ಕರೆ: ರಾಜ್ಯದಲ್ಲಿ ಮತ್ತೆ ಮೈಕ್ ದಂಗಲ್ ಶುರುವಾಗಿದೆ. ಆಜಾನ್‌ಗೆ ಬಳಸೋ ಧ್ವನಿವರ್ಧಕ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಶ್ರೀರಾಮಸೇನೆ ಸಜ್ಜಾಗಿದೆ. ಆಗಸ್ಟ್ 23 ರಂದು ರಾಜ್ಯದ ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡೋದಾಗಿ ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಲು ಮಹಿಳೆಯ ಕತ್ತು ಸೀಳಿ ಮೊಬೈಲ್ ಕದ್ದ ಅಪ್ರಾಪ್ತ
ರಾಜ್ಯದಲ್ಲಿ ಅನಧಿಕೃತವಾಗಿ ಆಜಾನ್‌ಗೆ ಮೈಕ್ ಗಳನ್ನು ಬಳಸಲಾಗುತ್ತಿದೆ. ಸರ್ಕಾರದ ಸುತ್ತೋಲೆಯಂತೆ ಕಡಿಮೆ ಡೆಸಿಬಲ್ ಬಳಸುತ್ತಿಲ್ಲ. ಹೀಗಾಗಿ ಆಗಸ್ಟ್ 23 ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಅಂತ ಸಿದ್ದಲಿಂಗ ಸ್ವಾಮಿ ಹೇಳಿದ್ದಾರೆ.