ಹಾಸನ: ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಎ. ಮಂಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ನೀತಿಸಂಹಿತೆ ಜಾರಿ ಬಳಿಕವೂ ಎ ಮಂಜು ಅವರು ಸರ್ಕಾರಿ ಕಟ್ಟಡ ಬಳಸಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸೂಚನೆಯ ಮೇರೆಗೆ ಚುನಾವಣಾಧಿಕಾರಿ ರಾಜೇಶ್ ದೂರು ನೀಡಿದ್ದರು.
Advertisement
Advertisement
ಮಾರ್ಚ್ 26 ರಂದು ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಅಂದೇ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾಗಿರುವ ಮಂಜು ವಿರುದ್ಧ ಹಾಸನ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
Advertisement
ದೂರು ಏನಿತ್ತು?
ಸಚಿವರ ಕಚೇರಿ ಇದ್ದ ಕಟ್ಟಡದಲ್ಲಿ ಅನಧಿಕೃತವಾಗಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀತಿಸಂಹಿತೆ ಜಾರಿ ಬಳಿಕವೂ ಕಚೇರಿಯ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ಕೆಲ ಸಿಬ್ಬಂದಿ ಒಳಗೆ ಕೆಲಸಮಾಡುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ರೋಹಿಣಿ ಸಿಂಧೂರಿ ಅವರು ನೋಟೀಸ್ ನೀಡಿದ್ದರು.