– ರಸ್ತೆಯಲ್ಲಿ ಉಗುಳುವ ಮುನ್ನ ಯೋಚಿಸಿ, ಜೇಬಿಗೆ ಬೀಳಲಿದೆ ಕತ್ತರಿ
ಶಿವಮೊಗ್ಗ: ಎಲ್ಲೆಂದರಲ್ಲಿ ಅಲ್ಲಿ ಗುಟ್ಕಾ ಹಾಕಿಕೊಂಡು ಉಗಿದು, ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದ ಜನರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ದಂಡ ಪ್ರಯೋಗ ಮಾಡಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಉಗುಳುವುದು, ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಈಗಾಗಲೇ ಪಾಲಿಕೆ ಅಧಿಕಾರಿಗಳು ಗುಟ್ಕಾ ಜಗಿಯುತ್ತ, ಮಾಸ್ಕ್ ಹಾಕಿಕೊಳ್ಳದೆ ನಿಂತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸಿದ್ದಾರೆ. ಅಲ್ಲದೇ ರಸ್ತೆ ಮೇಲೆ ಉಗುಳಿದ್ದಕ್ಕೆ 500 ರೂ. ಮಾಸ್ಕ್ ಹಾಕದೇ ಓಡಾಡುತ್ತಿದ್ದ ವ್ಯಕ್ತಿಗಳಿಗೆ 100 ರೂ. ದಂಡ ಹಾಕಿದ್ದಾರೆ.
Advertisement
Advertisement
ಜನರಲ್ಲಿ ವೈರಸ್ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿರುವ ಪಾಲಿಕೆ ನಿನ್ನೆಯಿಂದ ದಂಡ ವಸೂಲಿಗೆ ಮುಂದಾಗಿದೆ. ನಾಗರಿಕರು ರಸ್ತೆಯಲ್ಲಿ ಉಗುಳುವ ಮುನ್ನ ಯೋಚಿಸಿ, ಇಲ್ಲದಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ ಎಂಬ ಎಚ್ಚರಿಕೆ ಸಾಧ್ಯ ರವಾನೆಯಾಗಿದೆ. ಈ ದಂಡ ಆರಂಭಿಕವಾಗಿದ್ದು, ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದೆ ಹೋದಲ್ಲಿ, ದಂಡದ ಪ್ರಮಾಣ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ನೀಡಿರುವ ಸೂಚನೆ ಮೇರೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಗೆ ಅಧಿಕಾರಿಗಳು ತಿಳಿಸಿದ್ದಾರೆ.