ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರು ಓದಲೇಬೇಕಾದ ಸುದ್ದಿ ಇದು. ಒಟ್ಟು 10.76 ಲಕ್ಷ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದಂಡ ವಿಧಿಸಿ ಬರೋಬ್ಬರಿ 5.38 ಕೋಟಿ ರೂ. ಹಣವನ್ನು11 ತಿಂಗಳಿನಲ್ಲಿ ವಸೂಲಿ ಮಾಡಿದೆ.
ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ ದಂಡ (Fine) ಹಾಕುತ್ತಿದೆ. ಕಳೆದ ವಾರ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಗಳ ಕಾಲ ನಿಂತಿದ್ದ ಯುವಕನಿಗೆ 50 ರೂ. ದಂಡ ಹಾಕಿತ್ತು. ಇದಾದ ಬಳಿಕ ಈಗ ಆಸಕ್ತಿಕರ ವಿಚಾರಗಳು ಬಯಲಿಗೆ ಬರುತ್ತಿದೆ. ಇದನ್ನೂ ಓದಿ: RCB vs CSK – ಸೈಬರ್ ಖದೀಮರಿಂದ ಭಾರೀ ವಂಚನೆ, ದೂರು ದಾಖಲು
ಕಳೆದ ಜೂನ್ ನಿಂದ ಇಲ್ಲಿಯವರೆಗೆ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚು ಸಮಯ ಕಳೆದಿದ್ದ 10.75 ಲಕ್ಷ ಪ್ರಯಾಣಿಕರಿಗೆ ದಂಡ ಹಾಕಲಾಗಿದೆ. ಒಬ್ಬರಿಗೆ 50 ರೂ. ನಂತೆ 5.38 ಕೋಟಿ ರೂ. ದಂಡ ವಸೂಲಿ ಮಾಡಿದೆ. ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ನಿಯಮದ ಪ್ರಕಾರವೇ ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಸಮರ್ಥನೆ ನೀಡಿದೆ.
ಪ್ರಯಾಣಿಕರು ಅವಧಿ ಮೀರಿ ನಿಲ್ದಾಣದಲ್ಲಿ ಇರಬಾರದು ಎಂಬ ನಿಯಮ ಮೊದಲಿನಿಂದಲೂ ಇದೆ. ಪ್ರಯಾಣಿಕರು ಹೆಚ್ಚು ಸಮಯ ನಿಲ್ದಾಣದಲ್ಲಿ ಕಳೆದರೆ ಇತರೆ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಹೀಗಾಗಿ 20 ನಿಮಿಷಕ್ಕೂ ಹೆಚ್ಚಿನ ಸಮಯ ಕಳೆದರೆ ದಂಡ ವಿಧಿಸಲಾಗುತ್ತದೆ. ಬಿಎಂಆರ್‌ಸಿಎಲ್ ದಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ. ಈ ದಂಡ ಪ್ರಯೋಗದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ. ಇದನ್ನೂ ಓದಿ: ತಲೆಮರೆಸಿಕೊಂಡಿರೋ ಪ್ರಜ್ವಲ್‍ಗೆ ಆರ್ಥಿಕ ಸಂಕಷ್ಟ ತಂದೊಡ್ಡಲು ಎಸ್‍ಐಟಿ ನಿರ್ಧಾರ!