ಶ್ರೀನಗರ: ಮಗನನ್ನು ಅಪಹರಿಸಿ ಕೊಂದ ಉಗ್ರರನ್ನು 72ಗಂಟೆಯೊಳಗೆ ಹತ್ಯೆ ಮಾಡಿ ಎಂದು ಮೃತ ಯೋಧ ಔರಂಗಜೇಬ್‍ನ ತಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಯೋಧನ ಸಾವಿಗೆ ಕಾರಣರಾದವರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಲು ಸರ್ಕಾರ ತಡಮಾಡುತ್ತಿದೆ ಯಾಕೆ? 72 ಗಂಟೆಯೊಳಗೆ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸದಿದ್ದಲ್ಲಿ ನನ್ನ ಮಗನ ಸಾವಿಗೆ ಕಾರಣರಾದವರ ವಿರುದ್ಧ ನಾನೇ ಸೇಡು ತೀರಿಸಿಕೊಳ್ಳುತ್ತೇನೆ ಎಂದು ನಿವೃತ್ತ ಯೋಧ ಮೃತ ಯೋಧನ ತಂದೆ ಹೇಳಿದ್ದಾರೆ.
Advertisement
ಜಮ್ಮು ಕಾಶ್ಮೀರದಲ್ಲಿ ಯೋಧರ ಸಾವಲ್ಲಿ ರಾಜಕೀಯ ಮಾಡುವವರ ವಿರುದ್ಧ ಹರಿಹಾಯ್ದಿರುವ ಮೃತ ಯೋಧನ ತಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ ತೋರಿಸುವ ಪ್ರತ್ಯೇಕತಾವಾದಿಗಳ ವಿರುದ್ಧ ಕಿಡಿಕಾರಿದ್ದಾರೆ.
Advertisement
ಔರಂಗಜೇಬ್‍ನ ಹತ್ಯೆ ಕೇವಲ ನಮ್ಮ ಕುಟುಂಬಕ್ಕೆ ಅಷ್ಟೆ ಆಘಾತಕಾರಿಯಲ್ಲ ಸೇನೆಗೂ ಕೂಡ ಹಿನ್ನಡೆಯಾಗಿದೆ. ಜಮ್ಮು ಕಾಶ್ಮೀರಕ್ಕೆ ಸೇರಿದವನಾಗಿ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು 2003 ರಿಂದ ತಡೆಯಲು ಏಕೆ ಸಾಧ್ಯವಾಗುತ್ತಿಲ್ಲ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಬದಲಾಗಬಹುದು ಎಂದು ಎಣಿಸಿದ್ದೆವು ಆದರೆ ಎಣಿಸಿದಷ್ಟು ಆಗಿಲ್ಲ. ಈ ವಿಚಾರದಲ್ಲಿ ರಾಜಕಾರಣ ಮಾಡುವವರನ್ನ ಹಾಗೂ ಪ್ರತ್ಯೇಕತಾವಾದಿಗಳನ್ನು ಕಾಶ್ಮೀರದಿಂದ ಓಡಿಸಬೇಕು. ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳು ಉಗ್ರರ ವಿರುದ್ಧ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ರಂಜಾನ್ ಹಬ್ಬವನ್ನು ಔರಂಗಜೇಬ್‍ನ ಜೊತೆ ಆಚರಿಸುವ ಆಸೆ ಆದರೆ ಅವನಿಲ್ಲ ಎಂದು ನೋವನ್ನು ಹಂಚಿಕೊಂಡರು.
ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ಮಾಡಿ ಔರಂಗಜೇಬ್ ಹತ್ಯೆ ಮಾಡಿದ್ದರು. ಇದರ ಸೇಡಿನಲ್ಲೇ ಉಗ್ರರು ಔರಂಗಜೇಬ್‍ನನ್ನು ಅಪಹರಿಸಿ ಹತ್ಯೆಗೈದಿದ್ದಾರೆ.ಇದನ್ನೂ ಓದಿ:ಉಗ್ರ ಸಮೀರ್ ನನ್ನು ಎನ್ ಕೌಂಟರ್ ಮಾಡಿದ್ದ ಯೋಧನ ಅಪಹರಣ
Srinagar: Wreath laying ceremony of Indian Army Rifleman Aurangzeb, whose body was found in Pulwama's Gusoo yesterday. He was abducted by terrorists from Pulwama district, yesterday. pic.twitter.com/l6vHBqvzJQ
— ANI (@ANI) June 15, 2018
Poonch: Family of Rifleman Aurangzeb mourns his death. He was abducted by terrorists and his body was found in Pulwama's Gusoo, yesterday. pic.twitter.com/F2xchFCB9A
— ANI (@ANI) June 15, 2018