ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಖಾಸಗಿ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಅನ್ನದಾನದ ಅನುದಾನ ಕಡಿತಗೊಳಿಸಿರುವುದು ಇದೀಗ ಭಾರೀ ವಿವಾದಕ್ಕೀಡಾಗಿದೆ.
ಸಚಿವ ರಮಾನಾಥ ರೈ ರಾಜಕೀಯ ದ್ವೇಷದಿಂದ ಈ ರೀತಿ ಮಾಡಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರೋಪಿಸಿದ್ದಾರೆ. ಆದರೆ ಕೇವಲ ಎರಡು ಖಾಸಗಿ ಶಾಲೆಗಳಿಗೆ ಅನುದಾನ ಕೊಡುವುದರ ಮೂಲಕ ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರ ದುರುಪಯೋಗಪಡಿಸಿಕೊಂಡಿದೆ. ಈಗ ರಾಜ್ಯ ಸರಕಾರ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.
Advertisement
ಕೊಲ್ಲೂರು ದೇವಸ್ಥಾನದಿಂದ ಎರಡು ಖಾಸಗಿ ಶಾಲೆಗಳಿಗೆ ಅನ್ನದಾನ ಬರುತ್ತಿದೆ. ಉಭಯ ಜಿಲ್ಲೆಗಳಲ್ಲಿ ಸಾಕಷ್ಟು ಶಾಲೆಗಳಿವೆ. ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಹೀಗಾಗಿ ವಾಪಾಸ್ ಪಡೆದಿದೆ ಅಂತ ಹೇಳಿದ್ರು.
Advertisement
ಕಳೆದ 4 ವರ್ಷಗಳ ಬಳಿಕ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಬೆಳವಣಿಗೆಗಳಿಂದಾಗಿ ರೈ ಈ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸುಮಾರು 5 ತಿಂಗಳಿಕ್ಕಿಂತಲೂ ಹಿಂದೆ ಈ ಬಗ್ಗೆ ಮುಖ್ಯಮಂತ್ರಿ ಪತ್ರ ಬರೆದಿದ್ದರು. ಅದಕ್ಕಿಂತಲೂ ಹಿಂದೆ ಕೂಡ ಎರಡು ಖಾಸಗಿ ಶಾಲೆಗಳಿಗೆ ಅನ್ನದಾನ ನೀಡಲಾಗುತ್ತಿದೆ ಎಂಬ ವಿಚಾರವನ್ನು ಗಮನಕ್ಕೆ ತಂದಿದ್ದರು. ಹೀಗಾಗಿ ಸರ್ಕಾರ ಇದೀಗ ವಾಪಾಸ್ ಪಡೆದುಕೊಂಡಿದೆ. ಹಿಂದಿನ ಸರ್ಕಾರ ಕೇವಲ ಎರಡು ಶಾಲೆಗಳಿಗೆ ಅನ್ನದಾನ ಕೊಟ್ಟಿರೋದು ಸರಿಯಲ್ಲ. ಅದೇ ಅಧಿಕಾರ ದುರುಪಯೋಗ. ಅದಕ್ಕಿಂತ ಕಷ್ಟದಲ್ಲರುವಂತಹ ಶಾಲೆಗಳು ಸಾಕಷ್ಟಿವೆ. ಅವರಿಗೂ ಕೂಡ ಕೊಡಬಹುದಿತ್ತು. ಯಾಕೆ ಸಂಘ ಪರಿವಾರದ ಶಾಲೆಗೆ ಮಾತ್ರ ಕೊಡಬೇಕಿತ್ತು ಅಂತ ಪ್ರಶ್ನಿಸಿದ್ದಾರೆ.
Advertisement
ಈ ಹಿನ್ನೆಲೆಯಿಂದ ಸರ್ಕಾರ ಗಮನಕ್ಕೆ ಬಂದ ಕೂಡಲೇ ವಾಪಾಸ್ ಪಡೆದಿದೆ. ಇದು ನಿನ್ನೆ ಮೊನೆಯ ಬೆಳವಣಿಗೆಯಿಂದಾಗಿ ಈ ನಿಧಾರ ತೆಗೆದುಕೊಂಡಿದ್ದಲ್ಲ. 5, 6 ತಿಂಗಳ ಹಿಂದೆಯೇ ಮುಜರಾಯಿ ಇಲಾಖೆಗೆ ಸಿಎಂ ಪತ್ರ ಬರೆದಿದ್ದರು. ಖಾಸಗಿ ಶಾಲಾ ಮಕ್ಕಳ ಅನ್ನದಾನಕ್ಕೆ ಸರ್ಕಾರ ದುಡ್ಡು ಕೊಡುವುದು ಇಲ್ಲ. ಬೇಕಿದ್ರೆ ಮಕ್ಕಳಿಗೆ ಅವರೇ ಅನ್ನ ಹಾಕಿಸಬೇಕು. ಅದು ಅವರ ಜವಾಬ್ದಾರಿ. ಕೆಲವು ಮಠಾಧೀಶರು ಶಾಲಾ ಮಕ್ಕಳಿಗೆ ಅನ್ನದಾನ ಮಾಡ್ತಾರೆ. ಆದ್ರೆ ಅವರು ಸರ್ಕಾರ ದುಡ್ಡು ಉಪಯೋಗಿಸಲ್ಲ ಅಂತ ಹೇಳಿ ಸರ್ಕಾರದ ನಡೆಯನ್ನು ರಮಾನಾಥ ರೈ ಸಮರ್ಥಿಸಿಕೊಂಡರು.
Advertisement
ಕಲ್ಲಡ್ಕ ಪ್ರಭಾಕರ್ ಶಾಲೆಗೆ ಬರುತ್ತಿದ್ದ ಅನುದಾನ ಕಡಿತಗೊಳಿಸಿದ ಸರ್ಕಾರ https://t.co/vv0O1dkuDV #Siddaramaiah #KalladkaPrabhakarBhat #School pic.twitter.com/pJS8n48nO2
— PublicTV (@publictvnews) August 8, 2017