ನವದೆಹಲಿ: 10 ಲಕ್ಷ ರೂ. ಲಂಚ ಪಡೆದ ಆರೋಪದಲ್ಲಿ ಕೇಂದ್ರ ಸಚಿವಾಲಯದ ಹಣಕಾಸು ಸಲಹೆಗಾರನನ್ನು ಸಿಬಿಐ (CBI) ಬಂಧಿಸಿದೆ.
ಭಾರತೀಯ ನಾಗರಿಕ ಲೆಕ್ಕಪತ್ರ ಸೇವೆಯ (ICAS) 2020 ರ ಬ್ಯಾಚ್‌ನ ಅಧಿಕಾರಿಯಾಗಿರುವ ಸಂದೀಪ್ ಬಂಧಿತ ಆರೋಪಿ. ಇವರು ನವೀಕರಣ ಕಡತವನ್ನು ಪ್ರಕ್ರಿಯೆಗೊಳಿಸಲು ಉದ್ಯಮಿಯೊಬ್ಬರಿಂದ 15 ಲಕ್ಷ ರೂ. ಲಂಚ ಪಡೆದಿದ್ದಾರೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮೊಬೈಲ್ ಆಸೆಗೆ ಅಪ್ರಾಪ್ತ ಗೆಳೆಯರಿಂದ ಅಜ್ಜನನ್ನೇ ಕೊಲ್ಲಿಸಿದ ಬಾಲಕಿ
ಖಾಸಗಿ ಕಂಪನಿಯ ನವೀಕರಣ ಫೈಲ್ ಅನ್ನು ತೆರವುಗೊಳಿಸಲು ತಮ್ಮ ಪತ್ನಿ ಮೂಲಕ 10 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

