ಬೆಂಗಳೂರು: ಹಣಕಾಸು ಇಲಾಖೆ (Finance Department) ಅಧಿಕಾರಿಗಳು ನನ್ನ ಇಲಾಖೆಗೆ ಸಹಕಾರ ಕೊಡುತ್ತಿಲ್ಲ. ಹಣಕಾಸು ಇಲಾಖೆಯವರು ದುಡ್ಡು ಕೊಡದೇ ನಾನು ಹೇಗೆ ಯೋಜನೆ ಅನುಷ್ಠಾನ ಮಾಡಲಿ ಎಂದು ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯ (Mankala Vaidya) ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ವಿಧಾನ ಪರಿಷತ್‌ನಲ್ಲಿ ನಡೆಯಿತು.
ಪ್ರಶ್ನೋತ್ತರ ಅವಧಿ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2024-25ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಘೋಷಣೆ ಮಾಡಿದ್ದ ಯೋಜನೆ ಅನುಷ್ಠಾನ ಮಾಡಲು ಎಫ್‌ಡಿ (ಹಣಕಾಸು ಇಲಾಖೆ) ಸಹಕಾರ ಕೊಡದ ಕಾರಣ ಕೆಲಸ ಆಗುತ್ತಿಲ್ಲ ಎಂದರು. ಮೀನುಗಾರಿಕೆ ಇಲಾಖೆಗೆ ಸಿಎಂ ಅವರು2024-25ನೇ ಸಾಲಿಗೆ 3 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ನಮ್ಮ ಇಲಾಖೆಯಿಂದ ಯೋಜನೆಗಳಿಗೆ ಡಿಪಿಆರ್ ಸಿದ್ಧ ಮಾಡಿ ಆರ್ಥಿಕ ಇಲಾಖೆಗೆ ಕಳುಹಿಸಲಾಗಿತ್ತು. ಆದರೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಡದೇ ಕೇಂದ್ರ ಸರ್ಕಾರದ ಯೋಜನೆ ಅಡಿ ಕೆಲಸ ಪ್ರಾರಂಭ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ನಿಗದಿಯಾಗಿದ್ದ ಯೋಜನೆಗಳ ಡಿಪಿಆರ್ ಅನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ.ಕೇಂದ್ರ ಸರ್ಕಾರದ ಅನುದಾನ ಬಂದಿಲ್ಲ. ಹೀಗಾಗಿ ಯೋಜನೆ ಪ್ರಾರಂಭ ಮಾಡಲು ಆಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸರ್ಕಾರದ ವೇತನ; ಸಮಿತಿ ರದ್ದಿಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಂಕಾಳ್ ವೈದ್ಯ ಮಾತಿಗೆ ಸದಸ್ಯ ನಾಗರಾಜ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು. 3 ಸಾವಿರ ಕೋಟಿ ಇದ್ದರೂ ಯಾಕೆ ಇಲಾಖೆ ಕೆಲಸ ಮಾಡುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸಚಿವರ ಮೇಲೆ ಏರು ಧ್ವನಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನನ್ನು ಪೊಲೀಸರ ವಶದಿಂದ ಬಿಡಿಸಲು ಯತ್ನ – ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಅಮನ್ ಸಾವೊ!