ಮೈಸೂರು: ಯುಜಿಸಿ ಮಾನ್ಯತೆ ನವೀಕರಣದ ಸಮಸ್ಯೆ ಎದುರಿಸುತ್ತಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕೊನೆಗೂ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ದೂರ ಶಿಕ್ಷಣದಡಿ ಕೋರ್ಸ್‍ಗಳನ್ನು ನಡೆಸಲು ಅನುಮತಿ ನೀಡಿದೆ.
ಯುಜಿಸಿಯಿಂದ ಮುಕ್ತ ವಿವಿಗೆ 2018-19ನೇ ಸಾಲಿನಿಂದ 2022-23ನೇ ಸಾಲಿನವರೆಗೆ ದೂರ ಶಿಕ್ಷಣದಡಿ ಒಟ್ಟು ಆಯ್ದ 17 ಕೋರ್ಸ್ ನಡೆಸಲು ಅನುಮತಿ ನೀಡಲಾಗಿದೆ. ಕಳೆದ ಐದು ವರ್ಷಗಳಿಂದ ಯುಜಿಸಿ ದೂರ ಶಿಕ್ಷಣ ಕೋರ್ಸ್‍ಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಮುಕ್ತಿ ವಿವಿಯಲ್ಲಿ ಸರ್ಟಿಫಿಕಟ್ ಪಡೆದ ವಿದ್ಯಾರ್ಥಿಗಳ ಭವಿಷ್ಯ ಅಂತಂತ್ರವಾಗಿತ್ತು. ಆದ್ರೆ 5 ವರ್ಷಕ್ಕೆ ಯುಜಿಸಿ ಹೊಸ ಮಾನ್ಯತೆ ಘೋಷಿಸಿದೆ.
ಮುಕ್ತ ವಿವಿಯ ದೂರ ಶಿಕ್ಷಣಕ್ಕೆ ಅನುಮತಿ ರದ್ದುಗೊಂಡಿದ್ದರಿಂದ ಸಾವಿರಾರು ಆಕಾಂಕ್ಷಿಗಳು ಗೊಂದಲಕ್ಕೆ ಈಡಾಗಿದ್ದರು. ಜತೆಗೆ ವಿವಿಧ ಕೋರ್ಸ್‍ಗಳಲ್ಲಿ ಈಗಾಗಲೇ ನೋಂದಾಯಿಸಿ ಪರೀಕ್ಷೆ ಬರೆದಿದ್ದವರು ಕೂಡ ಆತಂಕಕ್ಕೆ ಒಳಗಾಗಿದ್ದರು. ಕೊನೆಗೂ ಯುಜಿಸಿ ಮಾನ್ಯತೆ ನೀಡಿದ್ದರಿಂದ ಕೋರ್ಸ್ ಆಕಾಂಕ್ಷಿಗಳಿಗೆ ಪ್ರಯೋಜನವಾಗಲಿದೆ. ಬಿಎ, ಬಿಕಾಂ,ಲೈಬ್ರರಿ ಸೈನ್ಸ್. ಎಂ.ಎ ಹಿಸ್ಟರಿ, ಒಂ-ಅರ್ಥಶಾಸ್ತ್ರ, ಹಿಂದಿ, ಇಂಗ್ಲಿಷ್, ಪತ್ರಿಕೋದ್ಯಮ, ಕನ್ನಡ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಉರ್ದು, ಪರಿಸರ ಅಧ್ಯಾಯನ, ಎಂಕಾಂ. ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ವಿಷಯಗಳಿಗೆ ಮಾನ್ಯತೆ ಸಿಕ್ಕಿದ್ದು, ಉಳಿದ ಯಾವುದೇ ವಿಷಯದ ಕೋರ್ಸ್ ಪ್ರಾರಂಭ ಮಾಡುವಂತಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews