ಬೆಂಗಳೂರು: ಜಿಬಿಎ (GBA) ವ್ಯಾಪ್ತಿಯ 5 ನಗರ ಪಾಲಿಕೆಯ ವಾರ್ಡ್ಗಳಿಗೆ ಮೀಸಲಾತಿ ಅಂತಿಮ ಪಟ್ಟಿಯನ್ನು (Reservation List) ಪ್ರಕಟಿಸಲಾಗಿದೆ.
ಜನವರಿ 8ರಂದು ಕರುಡು ಪ್ರತಿ ಬಿಡುಗಡೆ ಮಾಡಿ 15 ದಿನದೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕೆಲವೊಂದು ಆಕ್ಷೇಪಣೆಗಳನ್ನ ಸ್ವೀಕರಿಸಿ ಬದಲಾವಣೆ ಮಾಡಿದ ನಗರಾಭಿವೃದ್ಧಿ ಇಲಾಖೆ ಸರ್ಕಾರಕ್ಕೆ ಮೀಸಲಾತಿ ಪಟ್ಟಿಯನ್ನು ಸಲ್ಲಿಸಿತ್ತು. ವಾರ್ಡ್ ಮೀಸಲಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ ಹಿನ್ನೆಲೆ ಜಿಬಿಎ ವ್ಯಾಪ್ತಿಯ 369 ವಾರ್ಡ್ಗಳಿಗೆ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – 255 ರನ್ ಹೊಡೆದು ವಿಶ್ವದಾಖಲೆ ಬರೆದ ಟೀಂ ಇಂಡಿಯಾ
ಇನ್ನು ಯಾವ್ಯಾವ ಸಮುದಾಯಕ್ಕೆ ಎಷ್ಟೆಷ್ಟು ಮೀಸಲಾತಿ ಎಂಬುದನ್ನು ನೋಡುವುದಾದರೆ, ಮಹಿಳೆಯರಿಗೆ ಶೇಕಡಾ 50ರಷ್ಟು ವಾರ್ಡ್ಗಳನ್ನು ಮೀಸಲಿಡಲಾಗಿದೆ ಎಂಬುವುದು ಗಮನಾರ್ಹವಾಗಿದೆ. ಮೀಸಲಾತಿ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ, ಜಿಬಿಎ ಚುನಾವಣೆಗೆ ಸರ್ಕಾರ ಶೀಘ್ರವೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಇದನ್ನೂ ಓದಿ: ದಲಿತರಿಗೆ ಅನ್ಯಾಯವೆಸಗಿರುವ ಸಚಿವ ಮಹದೇವಪ್ಪ ಸಿಕ್ಕರೆ ಕಪಾಳಮೋಕ್ಷ ಮಾಡುವಾಸೆ: ಶಿವನಗೌಡ
ಆದರೆ ಈ ಮಧ್ಯೆ ವಾರ್ಡ್ ಮೀಸಲಾತಿ ಸರಿಯಿಲ್ಲ, ಭಾರಿ ತಪ್ಪುಗಳಿವೆ. ಕಾಂಗ್ರೆಸ್ ಗೆಲ್ಲುವ ರೀತಿ ಮೀಸಲಾತಿ ನೀಡಿದ್ದಾರೆ. ಇದನ್ನು ವಿರೋಧಿಸಿ ಕೋರ್ಟ್ಗೆ ಹೋಗುವುದಾಗಿ ಬಿಜೆಪಿ ಹೇಳಿದೆ. ಇದನ್ನೂ ಓದಿ: 33% ಮಹಿಳಾ ಮೀಸಲು ಸಂಸದೀಯ ಹೆಗ್ಗಳಿಕೆ ಹೆಚ್ಚಿಸಲಿದೆ: ಹೆಚ್ಡಿಕೆ
ಬಿಬಿಎಂಪಿ ಮೀಸಲಾತಿ:
ಒಟ್ಟು ವಾರ್ಡ್ಗಳು – 369
ಮಹಿಳೆಯರಿಗೆ ಮೀಸಲಾದ ವಾರ್ಡ್ಗಳು – 176
ಪರಿಶಿಷ್ಟ ಜಾತಿಗೆ ಮೀಸಲಾದ ವಾರ್ಡ್ಗಳು – 43
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ವಾರ್ಡ್ಗಳು – 07
ಹಿಂದುಳಿದ ಎ ವರ್ಗಕ್ಕೆ ಮೀಸಲಾದ ವಾರ್ಡ್ಗಳು – 97
ಹಿಂದುಳಿದ ಬಿ ವರ್ಗಕ್ಕೆ ಮೀಸಲಾದ ವಾರ್ಡ್ಗಳು – 24
ಸಾಮಾನ್ಯ ವರ್ಗ ವಾರ್ಡ್ಗಳು- 198

