ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯ ಮೂಲಕ ಪಾಕ್‌ಗೆ ಭಾರತ ತಕ್ಕ ಪಾಠ ಕಲಿಸಿದೆ. ಇದಕ್ಕೆ ಬಾಲಿವುಡ್ (Bollywood) ತಾರೆಯರು ಮೆಚ್ಚುಗೆ ಸೂಚಿಸಿದ್ದರು. ಈ ಬೆನ್ನಲ್ಲೇ ‘ಆಪರೇಷನ್ ಸಿಂಧೂರ’ ಟೈಟಲ್ ನೊಂದಣಿ ಮಾಡಲು ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ನಿರ್ಮಾಪಕರು (Producers) ಈ ಟೈಟಲ್‌ಗಾಗಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ
ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯುತ್ತಿದೆ. ಇತ್ತ ‘ಆಪರೇಷನ್ ಸಿಂಧೂರ’ ಟೈಟಲ್ ಪೈಪೋಟಿ ಶುರುವಾಗಿದೆ. ಈಗಾಗಲೇ ಉರಿ, ಬಾರ್ಡರ್ ಸೇರಿದಂತೆ ಭಾರತ ಸೇನೆಗೆ ಸಂಬಂಧಿಸಿದ ಅನೇಕ ಸಿನಿಮಾಗಳು ಬಂದಿವೆ. ಅದಂತೆಯೇ ನೈಜ ಕಥೆ ‘ಆಪರೇಷನ್ ಸಿಂಧೂರ’ದ ಕುರಿತು ಸಿನಿಮಾ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ- ಡಾಲಿ
ವರದಿಗಳ ಪ್ರಕಾರ, 15ಕ್ಕೂ ಹೆಚ್ಚು ಖ್ಯಾತ ನಿರ್ಮಾಣ ಸಂಸ್ಥೆಗಳು ಆಪರೇಷನ್ ಸಿಂಧೂರ ಟೈಟಲ್ ಅನ್ನು ರಿಜಿಸ್ಟರ್ ಮಾಡಲು ಮುಂದಾಗಿದೆ. ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿ ಅಧ್ಯಕ್ಷ ಬಿಎನ್ ತಿವಾರಿ ಈ ವಿಚಾರವನ್ನು ನಿಜವೆಂದು ಒಪ್ಪಿಕೊಂಡಿದ್ದಾರೆ. ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್‌ನಲ್ಲಿ ಈ ಟೈಟಲ್‌ಗಾಗಿ ನೊಂದಣಿಯನ್ನು ಮಾಡಿಸಿವೆ. ಆದರೆ, ಟೈಟಲ್ ಯಾರ ಪಾಲಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಅಂದಹಾಗೆ, ನಿರ್ಮಾಪಕ ಅಶೋಕ ಪಂಡಿತ್, ಆದಿತ್ಯ ಧರ್, ಮಹಾವೀರ್ ಜೈನ್, ನಿರ್ಮಾಪಕ ಮಧುರ್ ಭಂಡಾರ್ಕರ್, ಜಾನ್ ಅಬ್ರಾಹಂ ನಿರ್ಮಾಣ ಸಂಸ್ಥೆ ಸೇರಿದಂತೆ ಅನೇಕರು ಆಪರೇಷನ್ ಸಿಂಧೂರ ಟೈಟಲ್ ನೊಂದಣಿ ಮಾಡಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ರಿಯಲ್ ಸ್ಟೋರಿಗಳು ಸಿನಿಮಾ ರೂಪದಲ್ಲಿ ಬಂದು ಗೆದ್ದಿರೋದಿದೆ. ಹಾಗಾಗಿ ‘ಆಪರೇಷನ್ ಸಿಂಧೂರ’ ಟೈಟಲ್ ಸದ್ಯ ಸಂಚಲನ ಸೃಷ್ಟಿಸಿದೆ.