ಅಮರಾವತಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award) ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ಮಾಪಕ (Filmmaker) ಕಾಸಿನಾಧುನಿ ವಿಶ್ವನಾಥ್ (92) (K Viswanath) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
Advertisement
Advertisement
`ಕಲಾತಪಸ್ವಿ’ (Kalatapasvi) ಎಂದೇ ಖ್ಯಾತರಾಗಿರುವ ವಿಶ್ವನಾಥ್ ಅವರು ಫೆಬ್ರವರಿ 1930ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದರು. ತೆಲುಗು ಚಿತ್ರರಂಗದಲ್ಲಿ (Telugu Industry) ಮಾತ್ರವಲ್ಲದೇ ತಮಿಳು ಹಾಗೂ ಹಿಂದಿ ಚಲನಚಿತ್ರಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ.
Advertisement
1951ರಲ್ಲಿ ಪಾತಾಳ ಭೈರವಿ ಸಿನಿಮಾದ ಮೂಲಕ ಸಹಾಯಕ ನಿರ್ದೇಶಕರಾಗಿ ಸಿನಿಮಾ (Cinema) ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ಕೆ ವಿಶ್ವನಾಥ್, 1965 ರಲ್ಲಿ `ಆತ್ಮ ಗೌರವಂ’ ಸಿನಿಮಾದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ಇದನ್ನೂ ಓದಿ: ಖ್ಯಾತ ನಟ ನಿತಿನ್ ಪಾಲಾದ ‘ಕಬ್ಜ’ ಸಿನಿಮಾದ ಆಂಧ್ರ-ತೆಲಂಗಾಣ ಹಕ್ಕು
Advertisement
`ಸ್ವಾತಿ ಮುತ್ಯಂ (Swati Mutyam), ಸಾಗರ ಸಂಗಮಂ, ಶಂಕರಾಭರಣಂ, ಸಪ್ತಪದಿ, ಸಿರಿವೆನ್ನೆಲ, ಶುಭಲೇಖ, ಶ್ರುತಿಲಯಲು’ ಸೇರಿದಂತೆ ಹತ್ತು ಹಲವು ಅತ್ಯದ್ಭುತ ತೆಲುಗು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ವಿಶ್ವನಾಥ್, ಹಿಂದಿ ಭಾಷೆಯಲ್ಲೂ `ಈಶ್ವರ್, ಸಂಜೋಗ್, ಸುರ ಸಂಗಮ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಸ್ವರಾಭಿಷೇಕಂ, ಅತಡು, ಠಾಗೂರ್’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಟ, ನಿರ್ದೇಶಕರಾಗಿ, ಚಿತ್ರಕಥೆಗಾರರಾಗಿಯೂ ತನ್ನದೇ ಆದ ಛಾಪು ಮೂಡಿಸಿ ತೆಲುಗು ಚಿತ್ರರಂಗದಲ್ಲಿ ಕಲಾ ತಪಸ್ವಿ ಎಂದೇ ಹೆಸರಾಂತರಾಗಿದ್ದರು.
ವಿಶ್ವನಾಥ್ ಅವರಿಗೆ 1992ರಲ್ಲಿ ಪದ್ಮಶ್ರೀ, 5 ರಾಷ್ಟ್ರೀಯ ಪ್ರಶಸ್ತಿಗಳು, ಆಂಧ್ರಪ್ರದೇಶ ಸರ್ಕಾರದಿಂದ 20 ನಂದಿ ಪ್ರಶಸ್ತಿಗಳು, ಜೀವಮಾನ ಸಾಧನೆ ಸೇರಿ 10 ಫೆಲ್ಮ್‌ಫೇರ್ ಪ್ರಶಸ್ತಿಗಳು ಸಂದಿವೆ. ಅಲ್ಲದೇ ಭಾರತೀಯ ಚಿತ್ರರಂಗದ ಅತ್ಯುನ್ನತ `ದಾದಾಸಾಹೇಬ್ ಫಾಲ್ಕೆ’ ಗೌರವ ಸಿಕ್ಕಿತ್ತು. ಇದನ್ನೂ ಓದಿ: ಕನ್ನಡದ ‘ಕಬ್ಜ’ ಸಿನಿಮಾಗೆ ಸಾಥ್ ನೀಡಲಿದ್ದಾರೆ ರಾಜಮೌಳಿ
ವಿಶ್ವನಾಥ್ ಅವರ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸಂತಾಪ ಸೂಚಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k