ಬಾಲಿವುಡ್‌ನಲ್ಲಿ (Bollywood) ಈಗಾಗಲೇ ಅನೇಕ ಸಾಧಕರ ಕುರಿತು ಸಿನಿಮಾ ಬಂದಿದೆ. ಕ್ರಿಕೆಟಿಗ ಎಂ.ಎಸ್ ಧೋನಿ, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರ ಜೀವನಗಾಥೆ ಸಿನಿಮಾ ರೂಪದಲ್ಲಿ ರಿಲೀಸ್ ಆಗಿದೆ. ಈಗ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಬಯೋಪಿಕ್ ಬರೋದಾಗಿ ಅಧಿಕೃತ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ:ನಾಗಚೈತನ್ಯ ಮದುವೆ ಡೇಟ್ ಫಿಕ್ಸ್- ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಭರ್ಜರಿ ಪ್ಲ್ಯಾನ್
ಭೂಷಣ್ ಕುಮಾರ್ ನಿರ್ಮಾಣದಲ್ಲಿ ಯುವರಾಜ್ ಸಿಂಗ್ (Yuvraj Singh) ಬಯೋಪಿಕ್ ಮೂಡಿ ಬರುತ್ತಿದ್ದು, ಚಿತ್ರಕ್ಕೆ ಟೈಟಲ್ ಇನ್ನೂ ಇಡಬೇಕಿದೆ. 13ನೇ ವಯಸ್ಸಿಗೆ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ ಯುವರಾಜ್ ಸಿಂಗ್ ಅವರ ಪಯಣ ಅತ್ಯದ್ಭುತ ಸಾಧನೆಗಳು, ಕ್ರಿಕೆಟ್ ಕ್ಷೇತ್ರದಲ್ಲಿ ಏಳು ಬೀಳಿನ ಕಥೆಗಳು ಈ ಸಿನಿಮಾದಲ್ಲಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.
View this post on Instagram
ಬಯೋಪಿಕ್ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್, ನನ್ನ ಜೀವನದ ಕಥೆ ಲಕ್ಷಾಂತರ ಅಭಿಮಾನಿಗಳ ಮುಂದೆ ಬರುತ್ತಿರೋದಕ್ಕೆ ಖುಷಿಯಿದೆ. ಕ್ರಿಕೆಟ್‌ನಲ್ಲಿ ಏಳು ಬೀಳಿನ ಜೊತೆಗೆ ಅಗಾಧವಾದ ಪ್ರೀತಿ ಜನರಿಂದ ಸಿಕ್ಕಿದೆ. ಈ ಕಥೆ ಇತರರಿಗೂ ಸ್ಫೂರ್ತಿಯಾಗಲಿದೆ ಎಂದಿದ್ದಾರೆ.
ಇನ್ನೂ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಕೊಡುಗೆಯನ್ನು ಮರೆಯೋಕೆ ಸಾಧ್ಯವಿಲ್ಲ. ತಮ್ಮ ಅದ್ಭುತ ಆಟದಿಂದ ಕ್ರಿಕೆಟ್ ಪ್ರೇಮಿಗಳನ್ನು ಯುವರಾಜ್ ರಂಜಿಸಿದ್ದರು. ಕೆಲ ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಯುವರಾಜ್ ಸಿಂಗ್, ಅದನ್ನು ಮೆಟ್ಟಿ ನಿಂತು ಮತ್ತೆ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡಿ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇದೀಗ ಈ ಕ್ರಿಕೆಟಿಗನ ಜೀವನಾಧರಿತ ಕಥೆ ತೆರೆ ಮೇಲೆ ತರಲು ಈಗಾಗಲೇ ಕೆಲಸ ಶುರುವಾಗಿದೆ. ಇನ್ನೂ ಅವರ ಕುರಿತು ಸಿನಿಮಾ ಬರಲಿದೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.