ಆನ್ ಲೈನ್ ಆಟಕ್ಕೆ ಸಂಬಂಧಿಸಿದಂತೆ ಕಳೆದೊಂದು ವರ್ಷದಿಂದ ನಟ ಕಿಚ್ಚ ಸುದೀಪ್ ಅವರನ್ನು ನಿಂದಿಸುತ್ತಾ ಬಂದಿರುವ ಲೇಖಕ, ಧಾರ್ಮಿಕ ಚಿಂತಕ ಅಹೋರಾತ್ರ ಮತ್ತು ಈತನ ಶಿಷ್ಯ ಚರಣ್ ಮೇಲೆ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ಸುದೀಪ್ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಹಾಯಕ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಇವರಿಗೆ ದೂರು ನೀಡಿದ್ದಾರೆ.
ಭಾರತೀಯ ಚಲನಚಿತ್ರ ರಂಗದಲ್ಲಿ ಹೆಸರಾಂತ ಕಲಾವಿದ ಕಿಚ್ಚ ಸುದೀಪ್ ಎಂದೇ ಪ್ರಖ್ಯಾತರಾಗಿರುವ ಶ್ರೀ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು ಸಾಮಾಜಿಕ ಜಾಲತಾಣಗಳ್ಲಲಿ ಅವಾಚ್ಯ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಚಿತ್ರರಂಗ ಹಾಗೂ ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರ ಸಂಗತಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಸೀರೆಯಲ್ಲಿ ಮಿಂಚಿದ ಉರ್ಫಿ ಜಾವೇದ್: ಹೀಗೂ ಸೀರೆ ಉಡಬಹುದಾ ಎಂದ ಫ್ಯಾನ್ಸ್
ಅಲ್ಲದೇ, ಅಹೋರಾತ್ರ ಮತ್ತು ಚರಣ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿ ಚ್ಯುತಿ ಬರದಂತೆ ಸಹಕರಿಸಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಇಂದು ದೂರು ನೀಡಿದ್ದಾರೆ. ಸುದೀಪ್ ಫ್ಯಾನ್ಸ್ ಮತ್ತು ಅಹೋರಾತ್ರ ನಡುವೆ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವಂತಹ ಅನೇಕ ಪೋಸ್ಟ್ ಗಳು ಸಿಗುತ್ತವೆ. ಆದರೆ, ಸುದೀಪ್ ಈ ಕುರಿತು ಒಂದೇ ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ.