ಹಿರೋಶೀಮಾ: ಭಾರತೀಯ ಮಹಿಳಾ ಹಾಕಿ ತಂಡ ಎಫ್‍ಐಹೆಚ್ ಸೀರಿಸ್ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದು, ಈ ಗೆಲುವನ್ನು ಆಟಗಾರ್ತಿಯರು ಸಂಭ್ರಮಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಏಷ್ಯಾನ್ ಚಾಂಪಿಯನ್ ಜಪಾನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಖುಷಿಯನ್ನು ಭಾರತ ತಂಡದ ಆಟಗಾರ್ತಿಯರು ಸಖತ್ ಜೋಶ್‍ನಲ್ಲಿ ಸಂಭ್ರಮಿಸಿದ್ದಾರೆ.
Advertisement
Advertisement
ಪಂದ್ಯದ ಬಳಿಕ ಬಸ್ಸಿನಲ್ಲಿ ಬರುತ್ತಿದ್ದಾಗ `ಸುನೋ ಗೌರ್ ಸೆ ದುನಿಯಾ ವಾಲೋ’ ಹಿಂದಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋವನ್ನು ಮೊದಲು ಹಾಕಿ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Advertisement
ಭಾರತೀಯ ಹಾಕಿ ಮಹಿಳಾ ತಂಡದ ಆಟಗಾರ್ತಿಯರು ಸಂಭ್ರಮಿಸಿರುವ ವಿಡಿಯೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದೆ.
Advertisement
Humne kaha hai jo, tum bhi kaho! ????????????????#IndiaKaGame #FIHSeriesFinals #RoadToTokyo @IndiaSports @Media_SAI @CMO_Odisha @sports_odisha @FIH_Hockey pic.twitter.com/fgeNn34iZ4
— Hockey India (@TheHockeyIndia) June 23, 2019
ಭಾರತದ ಕೀರ್ತಿಯನ್ನು ಹೆಚ್ಚಿಸಿದ ತಂಡದ ಆಡಗಾರ್ತಿಯರ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಂಡವನ್ನು ಅಭಿನಂದಿಸಿದ್ದಾರೆ.
Exceptional game, excellent outcome!
Congratulations to our team for winning the Women's FIH Series Finals hockey tournament.
This stupendous victory will further popularise hockey and also inspire many young girls to excel in the sport.
— Narendra Modi (@narendramodi) June 23, 2019
ಫೈನಲ್ ಪ್ರವೇಶಿಸುವ ಮೂಲಕ ಭಾರತ ಮತ್ತು ಜಪಾನ್ 2020 ಒಲಿಂಪಿಕ್ಸ್ ಅರ್ಹತಾ ಪಂದ್ಯಗಳ ಅಂತಿಮ ಸುತ್ತಿಗೆ ಅರ್ಹತೆ ಗಳಿಸಿಕೊಂಡಿವೆ.