ನವದೆಹಲಿ: ಅಸ್ಸಾಂ ಜೈಲಿನಲ್ಲಿದ್ದುಕೊಂಡೇ (Assam Jail) ಪಂಜಾಬ್‌ನ ಖಾದೂರು ಸಾಹಿಬ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ (Amritpal Singh) ಮುನ್ನಡೆ ಸಾಧಿಸಿದ್ದಾರೆ.
ಆರಂಭಿಕ ಸುತ್ತುಗಳಲ್ಲಿ ತೀವ್ರ ಪೈಪೋಟಿ ನೀಡಿದ್ದ ಅಮೃತ್‌ಪಾಲ್ ಸಿಂಗ್ 11 ಗಂಟೆಯ ಬಳಿಕ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಿಂಗ್ ಝಿರಾ ವಿರುದ್ಧ 44,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ (Congress) ಜಸ್ಬೀರ್ ಸಿಂಗ್ ಗಿಲ್ ಖಾದೂರ್ ಸಾಹಿಬ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
Advertisement
Advertisement
ಪ್ರತ್ಯೇಕ ಖಲಿಸ್ತಾನ ಚಳವಳಿ, ಶಸ್ತ್ರಾಸ್ತ್ರಗಳ ಸಂಗ್ರಹ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೇರಿದಂತೆ ಅನೇಕ ಗಣ್ಯರಿಗೆ ಬೆದರಿಕೆ ಹಾಕಿದ ಆರೋಪಗಳಡಿ ಅಮೃತ್‌ಪಾಲ್ ಸಿಂಗ್ ವಿರುದ್ಧ ಕಾರ್ಯಚರಣೆ ನಡೆಸಿ ಕಳೆದ ವರ್ಷ ಪಂಜಾಬ್ ಪೊಲೀಸರು ಬಂಧಿಸಿ ಅಸ್ಸಾಂನ ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ.
Advertisement
ಅಮೃತ್‌ಪಾಲ್ ಸಿಂಗ್ ಯಾರು?:
ಪಂಜಾಬ್‌ನಲ್ಲಿ ತನ್ನದೇ ಸಶಸ್ತ್ರ ಗುಂಪುಗಳನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದ ಈತ ‘ವಾರಿಸ್ ದಿ ಪಂಜಾಬ್’ ಹೆಸರಿನ ಧಾರ್ಮಿಕ ಸಂಘಟನೆ ನಡೆಸುತ್ತಿದ್ದ. ಅಮೃತ್‍ಪಾಲ್ ಸಿಂಗ್‌ಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಹಾಗೂ ಐಎಸ್‌ಐ ಬೆಂಬಲವಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿತ್ತು. ಅಮೃತಪಾಲ್ ಸಿಂಗ್ ಜಾರ್ಜಿಯಾಕ್ಕೆ ಭೇಟಿ ನೀಡಿದಾಗ ಅಲ್ಲಿ ಆತನಿಗೆ ಬೋಧನೆ ಮಾಡಲಾಗಿದೆ. ಖಲಿಸ್ತಾನ ಹೋರಾಟವನ್ನು ಜೀವಂತವಾಗಿಡಲು ಭಾರತದಲ್ಲಿ ಐಎಸ್‌ಐಗೆ ವ್ಯಕ್ತಿ ಬೇಕಿತ್ತು ಎಂದು ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿತ್ತು.