ಬಾಗಲಕೋಟೆ: ಕುಡಿದ ನಶೆಯಲ್ಲಿ ಎಗ್ ರೈಸ್ (Egg Rice) ತಿಂದು ಹಣ ಕೇಳಿದ್ದಕ್ಕೆ ಜಗಳ ಶುರುವಾಗಿ ಎಗ್‌ರೈಸ್ ಅಂಗಡಿ ಮಾಲೀಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಢ ಪಟ್ಟಣದಲ್ಲಿನ ಬಸ್ ನಿಲ್ದಾಣದ ಬಳಿ ರಾತ್ರಿ ಘಟನೆ ನಡೆದಿದೆ. ಗೈಬುಸಾಬ್ ಮುಲ್ಲಾ (29) ಕೊಲೆಯಾದ ವ್ಯಕ್ತಿಯಾದರೆ ಮಸ್ತಫಾ ಜಂಗಿ (22) ಕೊಲೆ ಮಾಡಿದ ಆರೋಪಿ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ಅಪಘಾತದಲ್ಲಿ ಮೂವರು ಸಾವು
ಮುಸ್ತಫಾ ಕುಡಿದ ನಶೆಯಲ್ಲಿ ಗೈಬುಸಾಬ್ ಮುಲ್ಲಾ ಅಂಗಡಿಗೆ ಬಂದು ಎಗ್ ರೈಸ್ ತಿಂದಿದ್ದ. ಬಳಿಕ ಗೈಬುಸಾಬ್ ಹಣ ಕೇಳಿದ್ದಕ್ಕೆ ಆತ ಕೊಡಲ್ಲ ಎಂದು ವಾದಿಸಿದ್ದ. ಇದಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿ ಮುಸ್ತಫಾ ಚಾಕುವಿನಿಂದ ಇರಿದು ಗೈಬುಸಾಬ್‌ನ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಮಹಿಳಾ ಸಂಘಟನೆಯಲ್ಲಿ ಹೆಂಡತಿ ಬ್ಯುಸಿ – ಬೇಸತ್ತ ಪತಿಯಿಂದ ಪತ್ನಿ, ಅತ್ತೆಯ ಭೀಕರ ಹತ್ಯೆ
ಈ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Web Stories