ಹುಬ್ಬಳ್ಳಿ: ನಗರದಲ್ಲಿ ಒಂದೇ ಗಂಟೆಯಲ್ಲಿ ಎರಡು ಪ್ರತ್ಯೇಕ ಕಡೆಗಳಲ್ಲಿ ಚಾಕು ಮತ್ತು ಬ್ಲೇಡ್ ನಿಂದ ಇರಿದು ಹಲ್ಲೆ ಮಾಡಲಾಗಿದೆ.
ಹಳೇ ಹುಬ್ಬಳಿಯ ಇಬ್ರಾಹಿಂಪುರದಲ್ಲಿ ಬಾಡಿಗೆ ವಿಷಯಕ್ಕೆ ಜಗಳ ಮಾಡಿ ಆಟೋ ಚಾಲಕನ ಕುತ್ತಿಗೆಗೆ ಬ್ಲೇಡ್ ನಿಂದ ಹಲ್ಲೆ ಮಾಡಲಾಗಿದೆ. ಆಟೋ ಚಾಲಕ ಅಕ್ತರ್ ಗೆ ಇರ್ಫಾನ್ ಎಂಬಾತ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ. ಗಾಯಾಳು ಅಕ್ತರ್ಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಇತ್ತ ಹಣಕಾಸಿನ ವಿಚಾರಕ್ಕೆ ಸನ್ಮೂನ್ ಕಾಡೆ ಎಂಬಾತನಿಗೆ ಅನಿಲ್ ಎಂಬಾತ ಚಾಕು ಇರಿದಿದ್ದಾನೆ. ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಪಿಐ ರಾಘವೇಂದ್ರ ಹಳ್ಳೂರ ಬಂಧಿಸಿದ್ದಾರೆ. ಇದನ್ನೂ ಓದಿ: ಕಾರಿಗೆ ಕಂಟೈನರ್ ಡಿಕ್ಕಿ- ಮಗು ಸೇರಿ ಐವರ ದುರ್ಮರಣ