ಚಿಕ್ಕಮಗಳೂರು: ಗಣಪತಿ ವಿಸರ್ಜನೆ ವೇಳೆ ಕುಣಿಯುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಬ್ಲೇಡ್‍ನಿಂದ ಹಲ್ಲೆ ನಡೆಸಿದ ಘಟನೆ ಗವನಗಳ್ಳಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಗೌತಮ್ (23) ಎಂದು ಗುರುತಿಸಲಾಗಿದೆ. ತಿಮ್ಮರಾಜ್ ಅರಸ್ ಎಂಬಾತ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಯುವಕನ ಕಿವಿ ಕತ್ತರಿಸಿ ಹೋಗಿದೆ. ಅಲ್ಲದೇ ಮುಖದಿಂದ ಕತ್ತಿನ ಭಾಗದವರೆಗೆ ತೀವ್ರ ಗಾಯವಾಗಿದೆ. ಇದನ್ನೂ ಓದಿ: ಕೊಲೆ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು
ಗಣಪತಿ ವಿಸರ್ಜನೆ ವೇಳೆ ಕುಣಿಯುವ ವೇಳೆ ಗುಂಪಿನ ಮಧ್ಯೆ ತಳ್ಳಿದ್ದಕ್ಕೆ ಗಲಾಟೆ ನಡೆದಿದೆ. ಈ ವೇಳೆ ಯುವಕನ ಮುಖದ ಮೇಲೆ ಬ್ಲೇಡ್‍ನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿದೆ. ಗಾಯಾಳು ಗೌತಮ್‍ಗೆ ಮಂಗಳೂರಿನ (Mangaluru) ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಚಿಕ್ಕಮಗಳೂರು (Chikkamagaluru) ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಚ್ಛೇದನ ಪಡೆದ ನಂತರವೂ ಮುಗಿಯದ ದ್ವೇಷ – ಕೌಟುಂಬಿಕ ಕಲಹಕ್ಕೆ ಪತ್ನಿ ಬೆಳೆದಿದ್ದ ಬೆಳೆ ನಾಶ ಮಾಡಿದ್ನಾ ಪತಿ?