ಅಸ್ಥಿ ವಿಸರ್ಜನೆ ವಿಚಾರದಲ್ಲಿ ಗಲಾಟೆ- 2 ಗುಂಪಿನ ಮಧ್ಯೆ ಮಾರಾಮಾರಿ

Public TV
1 Min Read
MND copy

ಮಂಡ್ಯ: ಅಸ್ಥಿ ವಿಸರ್ಜನೆ ಮಾಡಿಸುವ ವಿಚಾರದಲ್ಲಿ ಎರಡು ಗುಂಪಿನ ನಡುವೆ ಮಾರಮಾರಿ ನಡೆದ ಘಟನೆ ಶ್ರೀರಂಗಪಟ್ಟಣದ ಪಟ್ಟಣಕ್ಕೆ ಸಮೀಪದ ಕಾವೇರಿ ತ್ರಿವೇಣಿ ಸಂಗಮದಲ್ಲಿ ನಡೆದಿದೆ.

ಅಸ್ಥಿವಿಸರ್ಜನೆ ಮಾಡಿಸುವ ಎರಡು ಗುಂಪಿನ ಯುವಕ ನಡುವೆ ಮೊದಲು ಜಗಳ ಆರಂಭವಾಗಿದೆ. ಬಳಿಕ ಮಚ್ಚಿನಿಂದ ಯುವಕರು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಘಟನೆಯಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಭಯಭೀತರಾಗಿದ್ದು, ಸ್ಥಳದಲ್ಲಿ ಕೆಲಕಾಲ ಅತಂಕದ ವಾತವರಣ ನಿರ್ಮಾಣವಾಗಿದೆ.

vlcsnap 2018 11 14 11h24m52s115

ಶ್ರೀರಂಗಪಟ್ಟಣದ ಕಾವೇರಿ ನದಿಯಯಲ್ಲಿ ಅಸ್ಥಿ ವಿಸರ್ಜಿಸಲು ದೇಶದ ನಾನಾ ಭಾಗಗಳಿಂದ ಆಸ್ತಿಕರು ಆಗಮಿಸುತ್ತಾರೆ. ಹೀಗಾಗಿ ಅಸ್ಥಿ ವಿಸರ್ಜನೆ ಒಂದು ರೀತಿ ಹಣ ಗಳಿಕೆಯ ಮಾರ್ಗವಾಗಿ ಮಾರ್ಪಟ್ಟಿದೆ. ಅಸ್ಥಿ ವಿಸರ್ಜನೆ ಮಾಡಲು ಬರುವವರನ್ನು ತಮ್ಮತ್ತ ಸೆಳೆಯಲು ಕ್ರಿಯೆ ವಿಧಿವಿಧಾನ ನಡೆಸುವವರ ನಡುವೆಯೇ ಪೈಪೋಟಿ ನಡೆಯುತ್ತಿದೆ. ಈ ರೀತಿಯ ಪೈಪೋಟಿಯ ವೇಳೆ ಅಸ್ಥಿ ವಿಸರ್ಜನೆ ಮಾಡಲು ಬಂದವರನ್ನು ತಮ್ಮತ್ತ ಸೆಳೆಯಲು ಎರಡು ಗುಂಪುಗಳ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ.

ಈ ಘಟನೆ ಮಂಗಳವಾರ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ಸ್ಥಳೀಯ ಪೊಲೀಸರು ಈ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.

vlcsnap 2018 11 14 11h24m31s142

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *