ಕೊಪ್ಪಳ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ವಿದ್ಯಾರ್ಥಿಯನ್ನು ಕೊಠಡಿ ಮೇಲ್ವಿಚಾರಕ ಪ್ರಶ್ನಿಸಿದ್ದಕ್ಕೆ ಎರಡು ಕಾಲೇಜಿನ ಸಿಬ್ಬಂದಿ ಹೊಡೆದಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
Advertisement
ಕೊಪ್ಪಳದ ಗಂಗಾವತಿಯ ವಿದ್ಯಾನಗರದ ಶಾರದಾ ಎಜುಕೇಷನ್ ವ್ಯೆಜೆಆರ್‍ಪಿಯು ಕಾಲೇಜಿಗೆ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಲು ಬಂದಿದ್ದರು. ವಿದ್ಯಾನಿಕೇತನ್ ಕಾಲೇಜಿನ ವಿದ್ಯಾರ್ಥಿ ಒಬ್ಬ ತಾನು ತಂದಿದ್ದ ಪ್ಯಾಡ್ ಮೇಲೆ ಕೆಲವೊಂದು ಉತ್ತರಗಳನ್ನು ಬರೆದುಕೊಂಡಿದ್ದನು. ಇದನ್ನು ನೋಡಿದ ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.
Advertisement
Advertisement
ಈ ವೇಳೆ ವೈ ಜೆ ಆರ್ ಪಿ ಯು ಕಾಲೇಜಿನ ರಾಮಕೃಷ್ಣ ಮತ್ತು ವಿದ್ಯಾನಿಕೇತನ್ ಕಾಲೇಜಿನ ಪ್ರಿನ್ಸಿಪಾಲ್‍ರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಪರಿಣಾಮ ರಾಮಕೃಷ್ಣ ಅವರಿಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Advertisement
ಘಟನೆ ಸಂಬಂಧ ಸ್ಪಷ್ಟಿಕರಣ ನೀಡಿದ ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ, ನಮ್ಮ ಕಾಲೇಜಿನ ವಿದ್ಯಾರ್ಥಿಗೆ ಯಾರೋ ಹೊಡೆದಿದ್ದಾರೆ. ಅದನ್ನು ಕೇಳಲು ಕಾಲೇಜಿಗೆ ಹೋಗಿದ್ದ ಸಮಯದಲ್ಲಿ ಮಾತಿನ ಚಕಮಕಿ ನಡೆದಿದೆ. ನಮ್ಮ ಶಾಲೆಯ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಕಾಪಿ ಮಾಡಿಲ್ಲ ಅಂತ ಹೇಳಿದ್ದಾರೆ.
ಈ ಕುರಿತು ಗಂಗಾವತಿ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.