ಚಾಮರಾಜನಗರ: ಬರಗಾಲ ಸಮೀಪಿಸುತ್ತಿದ್ದ ಹಾಗೆ ನಾಡಿನಲ್ಲಿ ಜನರ ನಡುವೆ ಮಾತ್ರವಲ್ಲದೇ ಕಾಡಿನಲ್ಲಿ ನೀರಿಗಾಗಿ ಪ್ರಾಣಿಗಳ ಮಧ್ಯ ಸಂಘರ್ಷ ಏರ್ಪಟ್ಟಿದೆ.
ತನ್ನ ಅಳಿವಿಗೆ ಮನುಷ್ಯ ಮೃಗದಂತೆ ವರ್ತನೆ ಮಾಡುತ್ತಾನೆ, ಅದೇ ರೀತಿ ಸಾಧು ಪ್ರಾಣಿಯಂತಿರುವ ಕೆಲ ಪ್ರಾಣಿಗಳು ತಮ್ಮ ಉಳಿವಿಗಾಗಿ ಕ್ರೂರ ಮೃಗಗಳೊಂದಿಗೆ ಹೋರಾಟ ನಡೆಸುತ್ತವೆ. ಇದಕ್ಕೊಂದು ತಾಜ ಉದಾಹರಣೆ ಎಂಬಂತೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನೀರಿಗಾಗಿ ಹುಲಿಯನ್ನು ಆನೆಯೊಂದು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ.
Advertisement
ಬಂಡಿಪುರ ಅರಣ್ಯದ ಬತ್ತಿ ಹೋಗುತ್ತಿರುವ ಕೆರೆಯೊಂದರಲ್ಲಿ ಉಳಿದಿರುವ ಅಲ್ಪ ಸ್ವಲ್ಪ ನೀರನ್ನು ಆನೆ ತನ್ನ ಮರಿಯ ಜೊತೆ ನೀರು ಕುಡಿಯಲು ಬಂದಿದೆ. ಈ ವೇಳೆ ಹುಲಿಯು ಸಹ ಈ ಕೆರೆಗೆ ನೀರು ಕುಡಿಯಲು ಬಂದಿದೆ. ತಾನು ಕುಡಿಯುವ ನೀರನ್ನು ಹುಲಿ ಕುಡಿದುಕೊಳ್ಳುತ್ತದೆ ಎಂದು ತಿಳಿದು ಹುಲಿಯನ್ನು ಆನೆ ಕೋಪದಿಂದ ಅಟ್ಟಾಡಿಸಿಕೊಂಡು ಹೋಗಿದೆ. ಈ ದೃಶ್ಯ ಸಫಾರಿಗೆ ಬಂದಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
https://www.youtube.com/watch?v=BviWL8Eg-9U