ಕೊಪ್ಪಳ: ಮದ್ಯವನ್ನ ಎಂಆರ್ ಪಿ ಬೆಲೆಯಲ್ಲಿ ಮಾರಾಟ ಮಾಡೋದಕ್ಕೆ ಬಾರ್ ಮಾಲೀಕರು ಹಾಗೂ ಗ್ರಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳದ ಗಂಗಾವತಿಯಲ್ಲಿ ಸಿಎಲ್ 2 ಬಾರ್ ನಲ್ಲೇ ಪ್ರತಿ ಮದ್ಯದ ಪೌಚ್ ಮೇಲೆ 20 ರಿಂದ 30 ರೂಪಾಯಿ ಹೆಚ್ಚುವರಿ ಹಣ ಪಡೆಯುತ್ತಿರೋ ಬಾರ್‍ಗಳ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಕೂಡಾ ಸಾಕಷ್ಟು ವರದಿ ಮಾಡಿದರೂ ಅಬಕಾರಿ ಇಲಾಖೆ ಮಾತ್ರ ಕ್ರಮಕ್ಕೆ ಮುಂದಾಗಿಲ್ಲ.
Advertisement
Advertisement
ಗಂಗಾವತಿ ತಾಲೂಕಿನಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಅವರ ಸಿಎಲ್ 2 ಅಂಗಡಿಗಳಿವೆ. ಹಗಲುದರೋಡೆ ಮಾಡುತ್ತಿರೋ ಬಾರ್ ಗಳ ವಿರುದ್ಧ ಯಾವೊಬ್ಬ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಮದ್ಯಪ್ರಿಯರು ಈ ವಿಚಾರವನ್ನು ಸಾಕಷ್ಟು ಬಾರಿ ಹೇಳಿದರೂ ಯಾರು ತಲೆಯೇ ಕೆಡಿಸಿಕೊಂಡಿಲ್ಲ ಗ್ರಾಹಕ ರಮೇಶ್ ತಿಳಿಸಿದ್ದಾರೆ.
Advertisement
Advertisement
ಲಿಗಲ್ ಮೆಟ್ರೋಲಜಿ ಕಾಯ್ದೆ ಏನು ಹೇಳುತ್ತೆ?
ಪ್ಯಾಕೇಜ್ಡ್ ಉತ್ಪನ್ನಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಲೀಗಲ್ ಮೆಟ್ರೋಲಜಿ ಕಾಯ್ದೆ ಪ್ರಕಾರ ಅಪರಾಧ. ಯಾವುದೇ ವಸ್ತುವನ್ನು ಪೇಪರ್ ನಲ್ಲಿ ಪ್ಯಾಕ್ ಮಾಡಿದ್ದರೂ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ. ಕಡ್ಡಾಯವಾಗಿ ಪೊಟ್ಟಣ ಸಾಮಗ್ರಿ ನಿಯಮಾವಳಿಗಳನ್ನು ಪಾಲಿಸಿರಬೇಕು. ವಸ್ತುಗಳ ದರ ಹಾಗೂ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದರೆ ಮಾರಾಟಗಾರರ ಮೇಲೆ ಸ್ಥಳದಲ್ಲೇ ದಂಡ ವಿಧಿಸಲು ಅವಕಾಶವಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ವ್ಯಾಪ್ತಿಗೆ ಎಲ್ಲ ಅಂಗಡಿಗಳು, ಪೆಟ್ರೋಲ್ ಬಂಕ್, ಸೀಮೆಎಣ್ಣೆ ಮಾರಾಟಗಾರರು, ಬಟ್ಟೆ ಅಂಗಡಿಗಳು, ಪೊಟ್ಟಣ ತಯಾರಿಕಾ ಉದ್ಯಮಗಳು ಒಳಪಡುತ್ತದೆ.
ದಂಡ ಎಷ್ಟು?
ಯಾವುದೇ ಪ್ರೀ ಪ್ಯಾಕೇಜ್ಡ್ ಉತ್ಪನ್ನದ ಮೇಲೆ ನಮೂದಿಸಿರುವುದಕ್ಕೆ ಬದ್ಧವಾಗಿರದೆ ಅದನ್ನ ಮಾರಾಟ, ವಿತರಣೆ ಅಥವಾ ಡೆಲಿವರಿ ಮಾಡುವಾಗ ಸಿಕ್ಕಿಬಿದ್ದರೆ ಮೊದಲನೇ ಅಪರಾಧಕ್ಕಾಗಿ 25 ಸಾವಿರ ರೂ. ದಂಡ ಹಾಕುವ ಮೂಲಕ ಶಿಕ್ಷಿಸಲಾಗುತ್ತದೆ ಎಂದು ಲೀಗಲ್ ಮೆಟ್ರೊಲಜಿ ಕಾಯ್ದೆಯ ಸೆಕ್ಷನ್ 36 ಹೇಳುತ್ತದೆ. ಎರಡನೇ ಅಪರಾಧಕ್ಕೆ 50 ಸಾವಿರ ರೂ. ಹಾಗೂ ನಂತರದ ಅಪರಾಧಗಳಿಗೆ 1 ಲಕ್ಷ ರೂ ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆ ವಿಧಿಸಲಾಗುತ್ತದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ಮದ್ಯಕೋಟೆ?- ಇಲ್ಲಿ ಎಂಆರ್‍ಪಿಗಿಂತ ದುಪ್ಪಟ್ಟು ವಸೂಲಿ