ದೋಹಾ: ನವೆಂಬರ್, ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಆಯೋಜಕರು ಈಗಾಗಲೇ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಯಾವುದೇ ಆಟಗಾರ ಅಥವಾ ಅಭಿಮಾನಿಗಳು ವಿವಾಹೇತರ ಲೈಂಗಿಕ ಸಂಪರ್ಕ ಹೊಂದುವುದನ್ನು ನಿಷೇಧಿಸಲಾಗಿದೆ.
Advertisement
ದಂಪತಿ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಸಲಿಂಗಕಾಮವನ್ನು ಕೂಡಾ ನಿಷೇಧಿಸಿದೆ. ಫಿಫಾ ವೇಳೆ ಸೆಕ್ಸ್ ಕ್ರಿಯೆಗಳು ವ್ಯಾಪಕವಾಗಿ ನಡೆಯುತ್ತಿದ್ದು, ಇದೇ ಮೊದಲ ಬಾರಿ ಸೆಕ್ಸ್‌ಗೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ
Advertisement
Advertisement
ಕೊಕೇನ್ ಮತ್ತು ಇತರ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಿದ್ದು ಸಾಬೀತಾದರೆ ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. ವಿಶ್ವಕಪ್ ಸಮಯದಲ್ಲಿ ಮದ್ಯಕ್ಕೆ ಅನುಮತಿ ನೀಡಲಾಗಿದೆ. ಮದ್ಯ ಸೇವನೆಗೆಗೆ ಪ್ರತ್ಯೇಕ ವಲಯವನ್ನು ತೆರೆಯಲಾಗುತ್ತದೆ.
Advertisement
ಫುಟ್‌ಬಾಲ್ ಟೂರ್ನಿ ನವೆಂಬರ್ 21 ರಿಂದ ಆರಂಭವಾಗಲಿದೆ. ವಿಶೇಷವಾಗಿ 32 ತಂಡಗಳು ಆಡುತ್ತಿರುವ ಕೊನೆಯ ವಿಶ್ವಕಪ್ ಪಂದ್ಯ ಇದಾಗಿದೆ. ಇನ್ನು ಮುಂದೆ 48 ತಂಡಗಳು ಆಡಲಿದ್ದು 2026ರ ವಿಶ್ವಕಪ್ ಆತಿಥ್ಯವನ್ನು ಅಮೆರಿಕ, ಮೆಕ್ಸಿಕೋ, ಕೆನಡಾ ವಹಿಸಲಿದೆ.