ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

Public TV
1 Min Read
FIFA World Cup Final Kylian Mbappe consoled by French President Emmanuel Macron after losing final vs Argentina

ಲುಸೈಲ್‌: ಅರ್ಜೆಂಟೀನಾ(Argentina) ವಿರುದ್ಧದ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲು ಹೊಡೆದು ಕೊನೆಯವರೆಗೆ ಹೋರಾಡಿದ್ದ 23 ವರ್ಷದ ಕಿಲಿಯನಾ ಎಂಬಾಪೆಗೆ(Kylian Mbappe) ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಸಮಾಧಾನ ಮಾಡಿದ್ದಾರೆ.

ಪಂದ್ಯ ಸೋತ ಬಳಿಕ ಎಂಬಾಪೆ ಮೈದಾನದಲ್ಲೇ ಕುಳಿತು ಅಳುತ್ತಿದ್ದರು. ಈ ವೇಳೆ ಎಂಬಾಪೆ ಬಳಿ ತೆರಳಿದ ಮ್ಯಾಕ್ರನ್‌(Emmanuel Macron) ಸಮಾಧಾನ ಹೇಳಿದ್ದಾರೆ. ಅರ್ಜೆಂಟೀನಾದ ಗೋಲ್‌ಕೀಪ‌ರ್‌ ಎಮಿಲಿಯಾನೋ ಮಾರ್ಟಿನೆಜ್ ಕೂಡ ಇದ್ದರು. ಪಂದ್ಯ ಮುಗಿದ ಬಳಿಕ ತಂಡದ ಡ್ರೆಸ್ಸಿಂಗ್‌ ರೂಮಿಗೆ ತೆರಳಿದ ಮ್ಯಾಕ್ರನ್‌ ನೋವಿನಲ್ಲಿದ್ದ ಆಟಗಾರರಿಗೆ ಸಮಾಧಾನ ಹೇಳಿ ನಿಮ್ಮ ಆಟದ ಬಗ್ಗೆ ನಮಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೆಸ್ಸಿ ಮ್ಯಾಜಿಕ್‌- ಮೂರನೇ ಬಾರಿ ಅರ್ಜೆಂಟೀನಾ ಚಾಂಪಿಯನ್‌

ಎಂಬಾಪೆ 80, 82, 118 ನಿಮಿಷದಲ್ಲಿ ಗೋಲ್‌ ಹೊಡೆದಿದ್ದರು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಒಂದು ಗೋಲ್‌ ಬಾರಿಸಿದ್ದರು. ಈ ಟೂರ್ನಿಯಲ್ಲಿ 8 ಗೋಲು ಹೊಡೆದ ಎಂಬಾಪೆ ಗೋಲ್ಡನ್‌ ಬೂಟ್‌ ಪ್ರಶಸ್ತಿ ಜಯಿಸಿದರು.

ವಿಶ್ವಕಪ್‌ ಫೈನಲ್‌ಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಾಪೆ ಪಾತ್ರರಾಗಿದ್ದಾರೆ. ಈ ಮೊದಲು 1966ರಲ್ಲಿ ಇಂಗ್ಲೆಂಡಿನ ಜಿಯೋಫ್ ಹರ್ಸ್ಟ್ ಜರ್ಮನಿ ವಿರುದ್ಧ ಹ್ಯಾಟ್ರಿಕ್‌ ಗೋಲ್‌ ಬಾರಿಸಿದ್ದರು. 2018ರಲ್ಲಿ ಫೈನಲ್‌ ಕ್ರೋಷಿಯಾ ವಿರುದ್ಧವೂ ಎಂಬಾಪೆ 1 ಗೋಲು ಹೊಡೆದಿದ್ದರು.

120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್‌ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಗಿತ್ತು. ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು. ವಿಶೇಷ ಏನೆಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್‌ ಪ್ರವೇಶಿಸಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *