ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ಮೇಲಿನ ಅಮಾನತನ್ನು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಶುಕ್ರವಾರ ತೆರವುಗೊಳಿಸಿದೆ. ಈ ಕ್ರಮದಿಂದ 17 ವರ್ಷದೊಳಗಿನ ಮಹಿಳಾ ವಿಶ್ವಕಪ್ 2022ರ ಪಂದ್ಯದಲ್ಲಿ ಭಾರತ ಭಾಗವಹಿಸಲು ಸಾಧ್ಯವಾಗಲಿದೆ.
ಫಿಫಾ ಕೌನ್ಸಿಲ್‌ನ ಬ್ಯೂರೋ ಅನಗತ್ಯ ಮೂರನೇ ವ್ಯಕ್ತಿಯ ಪ್ರಭಾವದಿಂದಾಗಿ ಎಐಎಫ್‌ಎಫ್ ಅನ್ನು ಅಮಾನತುಗೊಳಿಸಿತ್ತು. ಇದೀಗ ಎಐಎಫ್‌ಎಫ್ ಮೇಲೆ ವಿಧಿಸಲಾಗಿದ್ದ ಅಮಾನತನ್ನು ತೆಗೆದುಹಾಕಲು ನಿರ್ಧರಿಸಿರುವುದಾಗಿ ಫಿಫಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? ಇಲ್ಲಿ ಪೂರ್ಣ ಮಾಹಿತಿ
Advertisement
Advertisement
ತಾನು ಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಐಎಫ್‌ಎಫ್‌ನ ದೈನಂದಿನ ವ್ಯವಹಾರಗಳು ಸದ್ಯಕ್ಕೆ 36 ರಾಜ್ಯ ಸಂಘಗಳು ಈಗಾಗಲೇ ಆಯ್ಕೆ ಮಾಡಿರುವ ಎಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿಯಿಂದ ನಿರ್ವಹಣೆಯಾಗಬೇಕು ಎಂದು ಎಂದು ಸುಪ್ರೀಂ ಸೂಚಿಸಿತ್ತು. ಸುಪ್ರೀಂ ಆದೇಶ ಪ್ರಕಟವಾದ ಬೆನ್ನಲ್ಲೇ ಎಐಎಫ್‌ಎಫ್ ತನ್ನ ಮೇಲೆ ವಿಧಿಸಲಾಗಿರುವ ಅಮಾನತನ್ನು ತೆರವುಗೊಳಿಸಬೇಕೆಂದು ಫಿಫಾ ಬಳಿ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಫಿಫಾ ಈಗ ಅಮಾನತನ್ನು ತೆರವುಗೊಳಿಸಿದೆ. ಇದನ್ನೂ ಓದಿ: ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ