ಬೆಂಗಳೂರು: ವಿಶ್ವದಾದ್ಯಂತ ಈಗ ಫಿಫಾ ಫೀವರ್ (FIFA World Cup) ಜೋರಾಗಿದೆ. 2022ರ ಫಿಫಾ ಆ್ಯಂಥಮ್ ಸಾಂಗ್ ಸಹ ಕಾಲ್ಚೆಂಡಿನ ಆಟದ ಕ್ರೇಜ್ ಹೆಚ್ಚು ಮಾಡಿತ್ತು. ಅದರ ಜೊತೆಗೆ ಈಗ ಬೆಂಗಳೂರಲ್ಲೂ ಈ ಫಿಫಾ ಫಿವರ್ ಜೋರಾಗಿದೆ. ತಮ್ಮದೇ ಆ್ಯಂಥಮ್ ಸಾಂಗ್ ಮಾಡಿಕೊಂಡು ವಿದ್ಯಾರ್ಥಿಗಳು ಫುಟ್‍ಬಾಲ್ (Football) ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.
ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಶುರುವಾದ ಬೆನ್ನಲ್ಲೇ ಸಿಲಿಕಾನ್ ಸಿಟಿ (Bengaluru) ಜನರಲ್ಲೂ ಫುಟ್‍ಬಾಲ್ ಕ್ರೇಜ್ ಹೆಚ್ಚಿಸಿದೆ. ನಗರದ ದೊಮ್ಮಲೂರು ಬಳಿ ಇರುವ ಬಿಬಿಎಂಪಿ ಮೈದಾನದಲ್ಲಿ ನಡೆದ ಅಂತರ್ ಕಾಲೇಜು ಫುಟ್‍ಬಾಲ್ ಟೂರ್ನಮೆಂಟ್‍ಗೆ ಇಂಡಿಯನ್ ಪೀಲೆ ಎಂದೇ ಖ್ಯಾತಿ ಗಳಿಸಿರುವ ಭಾರತದ ಫುಟ್‍ಬಾಲ್ ದಂತಕತೆ ನಾರಾಯಣಸ್ವಾಮಿ ಉಲಘನಾಥನ್ ಆಗಮಿಸಿದ್ರು. ಈ ವೇಳೆ ವಿದ್ಯಾರ್ಥಿಗಳು ಸೇರಿ ಮಾಡಿದ ಆ್ಯಂಥಮ್ ಸಾಂಗ್ ಗಮನಸೆಳೆಯಿತು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣಸ್ವಾಮಿ ಉಲಘನಾಥನ್, ನಾವು ಭಾರತವನ್ನು ಪ್ರತಿನಿಧಿಸುವ ಕಾಲದಲ್ಲಿ ಈಗ ನೋಡುವ ಫುಟ್‍ಬಾಲ್ ಕ್ರೇಜ್ ಇರಲಿಲ್ಲ. ಈಗ ನಮ್ಮ ಹುಡುಗರು ಫುಟ್‍ಬಾಲ್ ಬಗ್ಗೆ ಇಷ್ಟೊಂದು ಉತ್ಸಾಹದಿಂದಿರುವುದು ನೊಡೋಕೆ ಖುಷಿ ಆಗುತ್ತೆ. ಕರ್ನಾಟಕ ನನ್ನ ಎರಡನೇ ತವರು. ಇಲ್ಲಿ ಬರೋದು ಖುಷಿ ಆಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್
ಕ್ರಿಕೆಟ್ ಅನ್ನೆ ಹಾಸಿಹೊದ್ದಿರುವ ಭಾರತದಲ್ಲಿ ಫುಟ್‍ಬಾಲ್ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿಯಿದ್ರೂ ಸರಿಯಾದ ಅವಕಾಶಗಳ ಕೊರತೆಯಿದೆ. ಸರ್ಕಾರಗಳು ಫುಟ್‍ಬಾಲ್ ಬಗ್ಗೆಯೂ ಆಸಕ್ತಿ ತೋರಿದ್ರೇ ಭಾರತವೂ ಫುಟ್‍ಬಾಲ್‍ನಲ್ಲಿ ಮಿಂಚಬಹುದು. ಭಾರತದಲ್ಲಿ ಈಗಾಗಲೇ ಐಪಿಎಲ್ ಮಾದರಿಯಲ್ಲೇ ಫುಟ್‍ಬಾಲ್ ಲೀಗ್ ಕೂಡ ನಡೆಯುತ್ತಿದೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದೆ. ಇನ್ನಷ್ಟು ಅವಕಾಶ ಸಿಕ್ಕರೆ ಭಾರತ ಕೂಡ ಫುಟ್‍ಬಾಲ್‍ನಲ್ಲಿ ವಿಶ್ವಮಟ್ಟದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮೊರೊಕ್ಕೊ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ