ಕರ್ನಾಟಕದ ಗೃಹಜ್ಯೋತಿಗೆ ಫಿದಾ – ಬೆಸ್ಕಾಂಗೆ ಭೇಟಿ ನೀಡಿದ ತೆಲಂಗಾಣ ಅಧಿಕಾರಿಗಳು

Public TV
1 Min Read
Gruhajyothi

ಬೆಂಗಳೂರು: ಕರ್ನಾಟಕದ ಗೃಹಜ್ಯೋತಿಗೆ ತೆಲಂಗಾಣ ಫಿದಾ ಆಗಿದ್ದು, ತೆಲಂಗಾಣ (Telangana) ಗೃಹಜ್ಯೋತಿ ಬಗ್ಗೆ ಅಧ್ಯಯನ ಮಾಹಿತು ಪಡೆಯಲು ಬೆಸ್ಕಾಂಗೆ (BESCOM)  ಭೇಟಿ ನೀಡಿ ಚರ್ಚೆ ನಡೆಸಿದೆ.

ಕರುನಾಡಿನ ಗ್ಯಾರಂಟಿ ಸ್ಕೀಮ್ ಈಗ ಬೇರೆ ರಾಜ್ಯದಲ್ಲಿಯೂ ಹವಾ ಎಬ್ಬಿಸಿದಂತೆ ಕಾಣಿಸುತ್ತಿದೆ. ಕರ್ನಾಟಕದ ಗೃಹಜ್ಯೋತಿ (Gruha Jyothi )ಬಗ್ಗೆ ಅಧ್ಯಯನ ಮಾಹಿತಿ ಪಡೆಯಲು ಈಗ ತೆಲಂಗಾಣ ಸರ್ಕಾರ ಉತ್ಸಾಹ ತೋರುತ್ತಿದೆ. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂತು ಮಳಲಿ ಮಸೀದಿ – ಆಸ್ತಿ ತನ್ನದೆಂದು ಸಾಬೀತುಪಡಿಸಲು ವಕ್ಫ್‌ ಬೋರ್ಡ್‌ ತಯಾರಿ

ಕರ್ನಾಟಕದ ಗೃಹಜ್ಯೋತಿಗೆ ತೆಲಂಗಾಣ ಫಿದಾ ಆಗಿದೆ. ಕರುನಾಡಿನ ಗ್ಯಾರಂಟಿ ಈಗ ಬೇರೆ ರಾಜ್ಯದಲ್ಲಿಯೂ ಸಹ ಹವಾ ಎಬ್ಬಿಸಿದೆ. ಗೃಹಜ್ಯೋತಿ ಯಶಸ್ವಿ ಜಾರಿ ಬೆನ್ನಲ್ಲೇ ನೆರೆಯ ರಾಜ್ಯ ತೆಲಂಗಾಣದ ವಿದ್ಯುತ್ ವಿತರಣಾ ಕಂಪನಿ ಬೆಂಗಳೂರಿನ ಬೆಸ್ಕಾಂ ಕಚೇರಿಗೆ ಭೇಟಿ ನೀಡಿದೆ. ಗೃಹಜ್ಯೋತಿ ಸ್ಕೀಮ್‌ನ ಅನುಷ್ಟಾನ, ರಿಯಾಯಿತಿ ಹಾಗೂ ವಿದ್ಯುತ್ ಬಿಲ್ ಎಲ್ಲದರ ಬಗ್ಗೆಯೂ ಅಧಿಕಾರಿಗಳು ಸಮಗ್ರ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಪತ್ರೆಗಳ ಒಕ್ಕೂಟದ ಸಾರಥಿಯಾಗ್ತಾರಾ ಡಾ.ಸಿ.ಎನ್ ಮಂಜುನಾಥ್?

ಬೆಸ್ಕಾಂನ ಎಂಡಿ, ಬೆಸ್ಕಾಂ ಹಣಕಾಸು ವಿಭಾಗ ಮತ್ತು ಐಟಿ ಕಂದಾಯ ವಿಭಾಗದ ಜೊತೆ ತೆಲಂಗಾಣದ ವಿದ್ಯುತ್ ವಿತರಣ ಕಂಪನಿಯ ನಿರ್ದೇಶಕರು ಹಾಗೂ ಐಟಿ ವಿಭಾಗದವರು ಚರ್ಚೆ ನಡೆಸಿ ಅವರ ರಾಜ್ಯದಲೂ ಈ ಯೋಜನೆ ಜಾರಿಗೆ ತರುವ ಬಗ್ಗೆ ಉತ್ಸಾಹ ತೋರಿದ್ದಾರೆ. ತೆಲಂಗಾಣದಲ್ಲಿಯೂ ಕರ್ನಾಟಕದ ಗೃಹಜ್ಯೋತಿ ಸ್ಕೀಮ್ ಜಾರಿ ತರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಾರ್ಷಿಕೋತ್ಸವ – ಪಬ್ಲಿಕ್ ಹುಡುಗರು ಚಾಂಪಿಯನ್ಸ್‌

ರಾಜ್ಯದ ಗ್ಯಾರಂಟಿ ಅಲೆಯಲ್ಲಿ ಕಾಂಗ್ರೆಸ್ ತೆಲಂಗಾಣದಲ್ಲಿಯೂ ಕಮಾಲ್ ಮಾಡಿತ್ತು. ಹೀಗಾಗಿ ಗ್ಯಾರಂಟಿ ಹಿಂದೆ ಬಿದ್ದಿರುವ ತೆಲಂಗಾಣ ಸರ್ಕಾರ ಕರ್ನಾಟಕದ ಗ್ಯಾರಂಟಿ ಸ್ಕೀಮ್‌ಗಳ ಯಥಾವತ್ ಜಾರಿಗೆ ಸರ್ಕಸ್ ಮಾಡುತ್ತಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್‌ನಿಂದ ಕ್ಷಿಪ್ರ ಕಾರ್ಯಾಚರಣೆ – ಗುಂಡಿನ ದಾಳಿ

Share This Article