– ರಸಗೊಬ್ಬರ ಅಭಾವಕ್ಕೆ ಸರ್ಕಾರವೇ ಹೊಣೆ: ಬಿ.ಸಿ.ಪಾಟೀಲ್
ಹಾವೇರಿ: ರಾಜ್ಯದಲ್ಲಿ ರೈತರಿಗೆ ಯೂರಿಯಾ ಅಭಾವವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ ಹಾವೇರಿಯಲ್ಲಿ (Haveri) ಬಿಜೆಪಿ ಕಾರ್ಯಕರ್ತರು ಜಿಲ್ಲಾಡಳಿತ ಕಚೇರಿ ಮುತ್ತಿಗೆ ಹಾಕಿದ್ದಾರೆ.
ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಂತರ ಮಾತನಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ್ (B C Patil), ಯೂರಿಯಾ ರಸಗೊಬ್ಬರ ಅಭಾವ ಎದ್ದು ಕಾಣ್ತಿದೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ. ಸರ್ಕಾರಕ್ಕೆ ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ. ಹೀಗಾಗಿ ಯೂರಿಯಾ ಕಾಳ ಸಂತೆಯಲ್ಲಿ ಮಾರಾಟ ಆಗ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ – 5.46 ಕೋಟಿ ರೂ. ಕಾಣಿಕೆ ಸಂಗ್ರಹ
ಯೂರಿಯಾ ಗೊಬ್ಬರ (Urea Fertilizer) ಒಂದು ಚೀಲದ ಬೆಲೆ 1666 ರೂ. ರೈತರಿಗೆ 266 ರೂ. ಒಂದು ಚೀಲ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ 1400 ರೂ. ರೈತರಿಗೆ ಸಬ್ಸಿಡಿ ಕೊಡ್ತಿದೆ. ಈ ಸಬ್ಸಿಡಿ ಹಣ ಕಬಳಿಸುವ ದುರುದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಸರ್ಕಾರವು ವ್ಯಾಪಾರಿಗಳು ಮತ್ತು ಫ್ಯಾಕ್ಟರಿಗಳೊಂದಿಗೆ ಶಾಮೀಲಾಗಿದೆ. ಗೊಬ್ಬರವನ್ನ ಕಾಳ ಸಂತೆಯಲ್ಲಿ ಮಾರುವ ವ್ಯವಸ್ಥೆ ಹೊಂದಿದೆ. ಹೀಗಾಗಿ ರಾಜ್ಯಾದ್ಯಂತ ಯೂರಿಯಾ ಗೊಬ್ಬರದ ಅಭಾವ ಕಾಣುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ: ಮುತಾಲಿಕ್ ಜೊತೆ ವೇದಿಕೆ ಹಂಚಿಕೊಂಡ ನಯನ ಮೋಟಮ್ಮ – ಕೇಸರಿ ಶಾಲು ಧರಿಸಿರೋದು ಧರ್ಮಕ್ಕಾಗಿ ಎಂದ `ಕೈ’ ಶಾಸಕಿ
ಈ ವರ್ಷ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ರೈತರಿಗೆ ಗೊಬ್ಬರ ಸಿಗ್ತಿಲ್ಲ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಮಧ್ಯಂತರ ಪರಿಹಾರದ ಬಗ್ಗೆ ಮೌನವಹಿಸಿದೆ. ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಿ, ರೈತರಿಗೆ ಪಂಗನಾಮ ಹಾಕುವ ಕೆಲಸ ಆಗುತ್ತಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದತ್ತ ಬೊಟ್ಟು ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೃಷಿ ಸಚಿವರು ಬಹಳ ದುರಂಹಕಾರಿ ಮಾತುಗಳನ್ನಾಡ್ತಿದ್ದಾರೆ. ನಮಗೆ ಸರ್ಕಾರ ನಡೆಸಲು ನಮ್ಮ ಬಳಿ ಹಣವಿಲ್ಲ. ಹೀಗಾಗಿ ಗೊಬ್ಬರ ಕಾಳ ಸಂತೆಯಲ್ಲಿ ಮಾರಾಟ ಮಾಡ್ತೀವಿ ಅಂತ ನೇರವಾಗಿ ಜನರಿಗೆ ಹೇಳಿ. ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ಇದು ಹೇಡಿಗಳ ಕೆಲಸ. ನಮ್ಮ ಸರ್ಕಾರದ ಕಾಲದಲ್ಲಿ ರೈತರ ಜೀವನ ಸುಗಮವಾಗಿರಲು ಬೇಕಾದ ಎಲ್ಲವನ್ನೂ ಮಾಡಿದ್ದೇವೆ. ಈ ಸರ್ಕಾರ ತಾನೇ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದೆ ಎಂದು ಗುಡುಗಿದ್ದಾರೆ.