ಮಂಡ್ಯ: ಇಲ್ಲಿನ ಹುಳ್ಳೇನಹಳ್ಳಿಯ ಆಲೆಮನೆಯಲ್ಲಿ ನಡೆಯುತ್ತಿದ್ದ ಭ್ರೂಣ (Foetus) ಪತ್ತೆ ಮತ್ತು ಹತ್ಯೆಯ ಕರಾಳ ದಂಧೆಯನ್ನು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರು ಬಯಲಿಗೆ ತಂದಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
Advertisement
ಮಂಗಳವಾರ ಆರೋಗ್ಯ ಇಲಾಖೆಯಿಂದ ಡಿಎಚ್‍ಓ ಮೋಹನ್, ಕಂದಾಯ ಇಲಾಖೆಯಿಂದ ಎಸಿ ಶಿವಮೂರ್ತಿ ಹಾಗೂ ಪೊಲೀಸ್ ಇಲಾಖೆಯಿಂದ ಡಿವೈಎಸ್‍ಪಿ ಶಿವಮೂರ್ತಿ ಹಾಗೂ ಇತರ ಅಧಿಕಾರಿಗಳು ಆಲೆಮನೆಗೆ ಭೇಟಿ ನೀಡಿದರು. ಈ ವೇಳೆ ಪರಿಶೀಲನೆ ನಡೆಸಿ ಒಂದಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ತಂಡ ತೆರಳಿದ ಮೇಲೆ ಲೋಕಾಯುಕ್ತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಜೊತೆ ಹುಳ್ಳೇನಹಳ್ಳಿ ಗ್ರಾಮದಲ್ಲಿನ ಗ್ರಾಮಸ್ಥರ ಜೊತೆಯೂ ಸಹ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
Advertisement
Advertisement
ಲೋಕಾಯುಕ್ತ ಅಧಿಕಾರಿಗಳು ಆರಂಭದಿಂದ ತನಿಖೆ ನಡೆಸುತ್ತಿದ್ದು, ಸಂಕ್ಷಿಪ್ತ ವರದಿಯನ್ನು ಕಲೆ ಹಾಕ್ತಾ ಇದ್ದಾರೆ. ಇದರಲ್ಲಿ ಆರೋಗ್ಯ ಇಲಾಖೆ, ಪೊಲೀಸರು ಶಾಮಿಲಾಗಿದ್ದಾರಾ ಎಂಬುದರ ಬಗ್ಗೆಯೂ ಇನ್ವೇಷ್ಟಿಕೇಷನ್ ಸಹ ಮಾಡ್ತಾ ಇದ್ದಾರೆ. ಒಂದು ವೇಳೆ ಯಾರಾದ್ರು ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಮೀಲಾಗಿರುವ ಬಗ್ಗೆ ತಿಳಿದು ಬಂದ್ರೆ ಲೋಕಾಯುಕ್ತ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿ ಕಾಣ್ತಾ ಇದೆ.
Advertisement
ಒಂದು ಕಡೆ ಈ ಕರಾಳ ದಂದೆಯ ತನಿಖೆ ನಡೆಯುತ್ತಿದ್ರೆ, ಇನ್ನೊಂದೆಡೆ ದಂಧೆ ನಡೆಯುವಾಗ ಸೈಲೆಂಟ್ ಆಗಿದ್ದ ಆರೋಪಿ ನವೀನ್ ಅಕ್ಕನ ಮಗ ಪ್ರಶಾಂತ್ ಆಶಾ ಕಾರ್ಯಕರ್ತೆರಿಗೆ ಬೆದರಿಸುವ ಕೆಲಸಕ್ಕೆ ಮುಂದಾಗಿದ್ದಾನೆ. ನಿನ್ನೆ ಆಶಾ ಕಾರ್ಯಕರ್ತೆಯರು ಆಲೆಮನೆ ಸಮೀಪ ಹೋಗಿ ಪ್ರಶಾಂತ್‍ಗೆ ಕರೆಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಯಾರ ಪರ್ಮಿಷನ್ ತೆಗೆದುಕೊಂಡು ಆಲೆಮನೆ ಬಳಿ ಹೋಗಿದ್ದೀರಾ. ಅಲ್ಲಿ ಬೆಲೆ ಬಾಳುವ ವಸ್ತುಗಳು ಇವೆ. ನಾವು ಅಲ್ಲಿ ಸಿಸಿ ಕ್ಯಾಮೆರಾ ಹಾಕಿಸಿದ್ದೇವೆ. ನಿಮ್ಮ ನಂಬರ್ ನಿಂದ ಕರೆ ಬಂದಿದೆ, ಏನಾದ್ರು ಆದರೆ ನಿಮ್ಮ ಮೇಲೆ ಕೇಸ್ ಕೊಡ್ತೀನಿ ಎಂದು ಬೆದರಿಕೆ ಹಾಕಿದ್ದಾನೆ.