ಸರಣಿ ಗೆದ್ದರೂ ಮುಖದಲ್ಲಿ ನಗುವಿಲ್ಲ – ಕೊಹ್ಲಿಯನ್ನು ಗುರಾಯಿಸಿದ ಪಂತ್

Public TV
2 Min Read
Rishabh Pant

ಹೈದರಾಬಾದ್: ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಭಾರತ (India) ಮತ್ತು ಆಸ್ಟ್ರೇಲಿಯಾ (Australia) ನಡುವಿನ ಟಿ20 (T20) ಸರಣಿಯ 3ನೇ ಪಂದ್ಯ ನಡೆಯಿತು. ಪಂದ್ಯ ಗೆದ್ದು ಪ್ರಶಸ್ತಿ ಸ್ವೀಕರಿಸಿದ ವೇಳೆ ರಿಷಭ್ ಪಂತ್ (Rishabh Pant) ಒಂದೇಸಮನೆ ವಿರಾಟ್ ಕೊಹ್ಲಿಯನ್ನೇ ಗುರಾಯಿಸುತ್ತಿರುವ ವೀಡಿಯೋ (Virat Kohli) ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ.

ಪಂದ್ಯ ಗೆದ್ದಿದ್ದಕ್ಕಿಂತಲೂ ತಾನು ಕಣಕ್ಕಿಳಿದು ಅಬ್ಬರಿಸಲಿಲ್ಲ ಎನ್ನುವ ಕೋಪವೇ ರಿಷಭ್ ಪಂತ್ (Rishabh Pant) ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವಂತಿದೆ. ರಿಷಭ್ ಪಂತ್‌ನ ಈ ನಡೆಗೆ ಕೊಹ್ಲಿ ಅಭಿಮಾನಿಗಳು ಪಂತ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ

Team India 7

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇತ್ತಂಡಗಳ ನಡುವೆ 1-1 ರಲ್ಲಿ ಸಮಬಲ ಕಂಡಿತ್ತು. ಭಾನುವಾರದ ಪಂದ್ಯ ಫೈನಲ್‌ನಲ್ಲಿ ಸರಣಿ ಗೆಲ್ಲುವ ತವಕದಲ್ಲಿ ಎರಡು ತಂಡಗಳು ಕಣಕ್ಕಿಳಿದಿದ್ದವು. ಹಾಗಾಗಿ ರೋಚಕ ಕದನಕ್ಕೆ ಹೈದರಾಬಾದ್ ಸಾಕ್ಷಿಯಾಗಿತ್ತು. ಕ್ರೀಸ್‌ನಲ್ಲಿ ನಿಂತು ಅಬ್ಬರಿಸಿದ ವಿರಾಟ್ ಕೊಹ್ಲಿ (Virat Kohli) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಸಿಕ್ಸ್-ಫೋರ್‌ಗಳ ಭರ್ಜರಿ ಬ್ಯಾಟಿಂಗ್ ಮಾಡಿದರು.

Hyderabad stadium

ಕೊನೆಯ 6 ಎತೆಗಳಲ್ಲಿ 11 ರನ್‌ಗಳು ಬೇಕಿದ್ದಾಗಲೇ ಮೊದಲ ಎಸೆತವನ್ನು ಕೊಹ್ಲಿ ಸಿಕ್ಸ್‌ಗೆ ಅಟ್ಟಿದರು. 2ನೇ ಎಸೆತವನ್ನು ಬೌಂಡರಿ ಬಾರಿಸುವ ಪ್ರಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಇನ್ನೂ ಕೊನೆಯಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ (Dinesh Karthik) 3ನೇ ಎಸೆತದಲ್ಲಿ ಒಂದು ರನ್ ಕಲೆಹಾಕಿದರು. 5ನೇ ಎಸೆತವನ್ನು ಬೌಂಡರಿಗೆ ತಳ್ಳುವ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಗೆಲುವಿನ ನಗೆ ಬೀರಿದರು. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ

VIRAT KOHLI AND ROHITH SHARAMA

ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಕೊನೆಯ ಓವರ್‌ವರೆಗೂ ನಿಂತು ಅಬ್ಬರಿಸಿದ ಕೊಹ್ಲಿ ಪಾತ್ರ ಪ್ರಮುಖವಾಗಿತ್ತು. ಆದರೆ ಹಾಲಿ ವಿಶ್ವಚಾಂಪಿಯನ್‌ಗಳನ್ನ ಸೋಲಿಸಿದರೂ ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್‌ಗೆ ಪಂದ್ಯ ಗೆದ್ದಿದ್ದಕ್ಕಿಂತಲೂ ತಾನು ಕಣಕ್ಕಿಳಿಯಲಿಲ್ಲ ಎನ್ನುವ ಅಸಮಾಧಾನವೇ ಇದ್ದಂತೆ ಕಾಣುತ್ತಿದೆ ಎಂದು ನೆಟ್ಟಿಗರು ಸೂಚಿಸಿದ್ದಾರೆ. ಹಾಗಾಗಿ ರಿಷಭ್ ಮುಖದಲ್ಲಿ ಮಂದಹಾಸ ಮೂಡಲೇ ಇಲ್ಲ. ಕೊಹ್ಲಿಯನ್ನು ಗುರಾಯಿಸುತ್ತಲೇ ಇದ್ದರು. ಕೊನೆಯಲ್ಲಿ ಸಾಂಕೇತಿಕವಾಗಿ ನಕ್ಕು ಸುಮ್ಮನಾದರು.

Suryakumar Yadav AND Virat Kohli

ಭಾನುವಾರ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್‌ಗಳನ್ನು ಗಳಿಸಿತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ 19.5 ಓವರ್‌ಗಳಲ್ಲೇ 4 ವಿಕೆಟ್ ನಷ್ಟಕ್ಕೆ 187 ರನ್‌ಗಳನ್ನು ಪೇರಿಸುವ ಮೂಲಕ ಗೆಲುವು ಸಾಧಿಸಿತ್ತು.

Live Tv
[brid partner=56869869 player=32851 video=960834 autoplay=true]

Share This Article