– ಸಾಯಲು ಅಲ್ಲಿಗೆ ಹೋಗಬೇಕಾಗಿಲ್ಲ, ಬೇರೆ ಏನೋ ಆಗಿದೆ – ಸಂಶಯ ವ್ಯಕ್ತಪಡಿಸಿದ ಸಹೋದರಿ
ನವದೆಹಲಿ: ಒಂದು ವಾರದಿಂದ ಕಾಣೆಯಾಗಿರುವ ದೆಹಲಿ (Delhi) ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ದೇಬ್ನಾಥ್ (Sneha Debnath) ಅವರ ಹುಡುಕಾಟ ನಡೆಯುತ್ತಿದೆ. ಈ ಹೊತ್ತಲ್ಲೇ ಅವರ ಕೊಠಡಿಯಲ್ಲಿ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ʻನಾನು ವಿಫಲನಾಗಿದ್ದೇನೆ, ಎಂದು ಎನಿಸುತ್ತಿದೆ. ಸೇತುವೆಯಿಂದ ಹಾರಿ ನನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ನಾನು ಹೊರೆಯಂತೆ ಬಾಸವಾಗುತ್ತಿದ್ದೇನೆ. ಈ ರೀತಿ ಬದುಕಲು ಸಾಧ್ಯವಾಗುತ್ತಿಲ್ಲ. ಇದು ನನ್ನ ನಿರ್ಧಾರ ಎಂದು ಪತ್ರದಲ್ಲಿ ಬರೆದಿದ್ದಾರೆ.
ಆತ್ಮ ರಾಮ ಸನಾತನ ಧರ್ಮ ಕಾಲೇಜಿನಲ್ಲಿ ಸ್ನೇಹಾ ದೇಬ್ನಾಥ್ ವ್ಯಾಸಾಂಗ ಮಾಡುತ್ತಿದ್ದರು.ಅವರು ಮೂಲತಃ (Tripura) ತ್ರಿಪುರದವರಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬಂದಿದ್ದರು. ಜುಲೈ 7 ರಂದು, ಅವರು ತಮ್ಮ ಸ್ನೇಹಿತೆಯನ್ನು ಸರೈ ರೋಹಿಲ್ಲಾ ರೈಲ್ವೆ ನಿಲ್ದಾಣದಲ್ಲಿ ಬಿಡಲು ಹೋಗಿದ್ದರು. ಅಂದಿನಿಂದ ಅವರು ಕಾಣೆಯಾಗಿದ್ದರು. ಅವರನ್ನು ಪತ್ತೆಹಚ್ಚಲು ವ್ಯಾಪಕ ಹುಡುಕಾಟ ನಡೆಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ತ್ರಿಪುರದ ಯುವತಿ ದೆಹಲಿಯಲ್ಲಿ ನಿಗೂಢವಾಗಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ!
ಸ್ನೇಹಾ ಅವರ ಸಹೋದರಿ ಬಿಪಾಶಾ ದೇಬ್ನಾಥ್ ಈ ಬಗ್ಗೆ ಪ್ರತಿಕ್ರಿಯಿಸಿ, ಸಿಕ್ಕಿರುವ ಪತ್ರದಲ್ಲಿ ಅರ್ಥವಿಲ್ಲ. ಆಕೆ ಏಕೆ ಖಿನ್ನತೆಗೆ ಒಳಗಾಗಿದ್ದರು? ಏನು ನಡೆಯುತ್ತಿತ್ತು? ಎಂಬುದು ಇದರಲ್ಲಿ ಇಲ್ಲ. ಕೇವಲ ನಾಲ್ಕು ಸಾಲುಗಳಿವೆ. ಆಕೆ ನಿಜವಾಗಿಯೂ ಸಾಯಲು ಬಯಸಿದ್ದರೆ ಮನೆಯಲ್ಲಿ ಅಥವಾ ಹತ್ತಿರದಲ್ಲಿ ಅದಕ್ಕೆ ಹಲವು ಅವಕಾಶಗಳಿದ್ದವು. 60 ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸದ ಸ್ಥಳಕ್ಕೆ ಹೋಗಬೇಕಾಗಿರಲಿಲ್ಲ. ಇದರಲ್ಲಿ ಬೇರೆಯದ್ದೇ ಏನೋ ಆದಂತಿದೆ. ಆಕೆಯನ್ನು ಬೇರೆ ಯಾರಾದರೂ ನಿಯಂತ್ರಿಸುತ್ತಿದ್ದಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ನೇಹಾ ದೇಬ್ನಾಥ್ ಅವರ ತಂದೆ ಮತ್ತು ತಾಯಿ ಸೇರಿದಂತೆ ಅವರ ಕುಟುಂಬದ ಸದಸ್ಯರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡಿ, ಅವರ ಬಗ್ಗೆ ಸುಳಿವು ಸಿಕ್ಕರೆ ಹಂಚಿಕೊಳ್ಳಲು ಸಾರ್ವಜನಿಕರು ಮತ್ತು ಅಧಿಕಾರಿಗಳ ಸಹಾಯ ಕೋರಿದ್ದಾರೆ. ಇದನ್ನೂ ಓದಿ: ಪತ್ನಿಯಿಂದ ವಿಚ್ಛೇದನ – 40 ಲೀಟರ್ ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!