-ಡೆತ್‍ನೋಟ್ ಬರೆದು ವಿದ್ಯಾರ್ಥಿನಿ ನೇಣಿಗೆ ಶರಣು
ಶಿವಮೊಗ್ಗ: ಎಂಜಿನಿಯರ್ ಆಗಲು ನನಗೆ ಸಾಧ್ಯವಾಗ್ತಿಲ್ಲ, ನಾನು ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಶಿವಮೊಗ್ಗದ ಐಐಟಿ ವಿದ್ಯಾರ್ಥಿನಿಯೊಬ್ಬಳು ಅಸ್ಸಾಂನ ಗುಹವಾಟಿಯಲ್ಲಿನ ಹಾಸ್ಟೆಲ್‍ನಲ್ಲಿ ಆತ್ಮಹತ್ಯಗೆ ಶರಣಾಗಿದ್ದಾಳೆ.
ಅಸ್ಸಾಂನ ಗುವಾಹಟಿ ಐಐಟಿಯ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ ನಾಗಶ್ರೀ ಐತಾಳ್ ಹಾಸ್ಟೆಲ್ ಕೊಠಡಿಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಗಶ್ರೀ ಐತಾಳ್ ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೇ ಐಐಟಿ ಸೇರಿದ್ದಳು.
ಈಕೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮತ್ತಿಮನೆ ಸಮೀಪದ ಸೂರೆಘಟ್ಟದ ಚಂದ್ರಶೇಖರ ಐತಾಳ್ ಹಾಗೂ ಆಶಾ ದಂಪತಿಯ ಹಿರಿಯ ಪುತ್ರಿ. ಶಿವಮೊಗ್ಗದ ಗಾಜನೂರು ನವೋದಯ ಶಾಲೆಯಲ್ಲಿ ಓದಿದ ಪ್ರತಿಭಾವಂತ ವಿದ್ಯಾರ್ಥಿನಿ ನಾಗಶ್ರೀ, ರಾಷ್ಟ್ರೀಯ ಮಟ್ಟದ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಗುವಾಹಟಿ ಐಐಟಿಯಲ್ಲಿ ಬಿ.ಟೆಕ್ ಪದವಿಗೆ ಪ್ರವೇಶ ಪಡೆದಿದ್ದಳು.
ಆತ್ಮಹತ್ಯೆಗೂ ಮುನ್ನ ಪತ್ರವನ್ನು ಬರೆದಿಟ್ಟಿದ್ದು, ನಾನು ಶಿಕ್ಷಕಿ ಆಗಬೇಕಿತ್ತು. ಆದರೆ ಪೋಷಕರ ಆಸೆಯಂತೆ ಎಂಜಿನಿಯರ್ ಆಗಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾಳೆ. ಪೋಷಕರ ಬಯಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಅವರ ಆಸೆ ಈಡೇರಿಸಲು ಸಾಧ್ಯವಾಗದ ನಾನು ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಬರೆದಿದ್ದಾಳೆ.
ಬೆಳಗ್ಗೆ ಆರೋಗ್ಯ ಸರಿಯಿಲ್ಲ, ಕ್ಲಾಸಿಗೆ ಬರುವುದಿಲ್ಲ ಎಂದು ನಾಗಶ್ರೀ ಹಾಸ್ಟೆಲ್ ರೂಮಿನಲ್ಲೇ ಉಳಿದಿದ್ದಾಳೆ. ರೂಂಮೇಟ್ಸ್ ಕ್ಲಾಸ್ ಮುಗಿಸಿಕೊಂಡು ಬಂದ ನೋಡಿದಾಗ ಫ್ಯಾನಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv