ಪ್ರತಿ ವರ್ಷವೂ ಕಿಚ್ಚ ಸುದೀಪ್ (Sudeep), ವಾಲ್ಮೀಕಿ ಗುರುಪೀಠದ ಜಾತ್ರೆಗೆ (Valmiki Jatre)ತಪ್ಪದೇ ಹಾಜರಾಗುತ್ತಿದ್ದರು. ಆದರೆ, ಈ ಬಾರಿ ಸುದೀಪ್ ಅವರಿಗೆ ಆಹ್ವಾನ ನೀಡದೇ ಇರಲು ವಾಲ್ಮೀಕಿ ಶ್ರೀಗಳು ನಿರ್ಧರಿಸಿದ್ದಾರೆ. ಅದಕ್ಕೆ ಅವರದ್ದೇ ಆದ ಕಾರಣವನ್ನೂ ಅವರು ನೀಡಿದ್ದಾರೆ. ಪ್ರತಿ ಬಾರಿಯೂ ಸುದೀಪ್ ಜಾತ್ರೆಗೆ ಬರುತ್ತಾರೆ ಎಂದು ಲಕ್ಷಾಂತರ ಅಭಿಮಾನಿಗಳು ಕಾಯುತ್ತಾರೆ. ಆದರೆ, ಬಂದ ಮೇಲೆ ಅಲ್ಲಿ ಆಗುವ ಆವಾಂತರವೇ ಬೇರೆ ಅಂತಾರೆ ಶ್ರೀಗಳು.
ಕಳೆದ ಬಾರಿ ಕಿಚ್ಚನಿಗಾಗಿ ಕಾಯುತ್ತಿದ್ದ ಕೂತಿದ್ದ ಅಭಿಮಾನಿಗಳು ಸುದೀಪ್ ಬರಲ್ಲ ಎಂದಾಗ ಧಾಂದಲೆ ಮಾಡಿದರು. ಕುರ್ಚಿಗಳನ್ನು ಮುರಿದು ಹಾಕಿದರು. ಅದರ ಹಿಂದಿನ ವರ್ಷ ಸುದೀಪ್ ನೋಡಲು ಬಂದಿದ್ದ ಅಭಿಮಾನಿಗಳು ಗದ್ದಲು ಉಂಟು ಮಾಡಿದರು. ಅವರು ಬಂದರೂ, ಒಂದು ಆವಾಂತರ, ಬಾರದೇ ಇದ್ದರೂ ಸಮಸ್ಯೆ. ಹಾಗಾಗಿ ಈ ಬಾರಿ ಖುದ್ದು ಶ್ರೀಗಳೇ ಸುದೀಪ್ ಅವರಿಗೆ ಆಹ್ವಾನ ನೀಡಿಲ್ಲ.
ಸುದೀಪ್ ಅವರು ಬರುವುದರಿಂದ ನಮಗೂ ಸಂತೋಷವೇ ಆಗುತ್ತದೆ. ಆದರೆ, ಸುದೀಪ್ ಅವರನ್ನು ನೋಡಲು ಬಂದವರು ಶಾಂತ ರೀತಿಯಿಂದ ವರ್ತಿಸಿಲ್ಲ. ಹಾಗಾಗಿ ಬೇರೆಯವರಿಗೆ ಸಮಸ್ಯೆ ಆಗಬಾರದು ಎನ್ನುವ ಕಾಳಜಿ ಅಷ್ಟೇ ಎಂದು ಶ್ರೀಗಳು ತಿಳಿಸಿದ್ದಾರೆ. ಈ ಕಾರಣದಿಂದಾಗಿಯೇ ಈ ಬಾರಿಯೂ ಸುದೀಪ್ ವಾಲ್ಮೀಕಿ ಜಾತ್ರೆಗೆ ಹೋಗುತ್ತಿಲ್ಲ.