ಅಮರಾವತಿ: ಹಿಂದೂಗಳ ಪವಿತ್ರ ಕ್ಷೇತ್ರ ತಿರುಪತಿ (Tirupathi) ಗೆ ಕೇಂದ್ರ ಸರ್ಕಾರ (Central Government) ಶಾಕ್ ನೀಡಿದೆ. ತಿರುಮಲ ತಿರುಪತಿ ತಿಮ್ಮಪ್ಪನ ಸನ್ನಿಧಾನ ಹುಂಡಿಗಳಲ್ಲಿ ಸಂಗ್ರಹವಾದ ವಿದೇಶಿ ಕರೆನ್ಸಿ (Foreign Currency) ಯನ್ನು ಬ್ಯಾಂಕ್‍ಗಳಿಗೆ ಜಮೆ ಮಾಡದಂತೆ ನಿರ್ಬಂಧ ಹೇರಿದೆ.
Advertisement
ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ತಿಮ್ಮಪ್ಪನ ಹುಂಡಿಗೆ ವಿದೇಶಿ ಕರೆನ್ಸಿ ರೂಪದಲ್ಲಿ ಬಂದಿರುವ 26 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಹಾಗೆಯೇ ಉಳಿದಿದೆ. ಕಳೆದ ಮೂರು ವರ್ಷಗಳಿಂದ ಮೋದಿ ಸರ್ಕಾರ, ಎಫ್‍ಸಿಆರ್‍ಎ ಅಡಿಯಲ್ಲಿ ಟಿಟಿಡಿ (TTD)ಗೆ ನೀಡಿದ್ದ ಪರವಾನಗಿಯನ್ನು ಅಮಾನತಿನಲ್ಲಿ ಇಟ್ಟಿದೆ. ಹೀಗಾಗಿಯೇ ಬ್ಯಾಂಕ್‍ಗಳಿಗೆ ವಿದೇಶಿ ಕರನ್ಸಿ ಜಮೆ ಮಾಡಲು ಆಗುತ್ತಿಲ್ಲ ಎನ್ನಲಾಗಿದೆ.
Advertisement
Advertisement
ಈ ಬೆಳವಣಿಗೆ ಬಗ್ಗೆ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೇಂದ್ರ ಬಿಜೆಪಿ ಸರ್ಕಾರ ಏಕೆ ದೇಗುಲಗಳಿಗೆ ತೊಂದ್ರೆ ಕೊಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, #ಆ್ಯಂಟಿಹಿಂದೂಬಿಜೆಪಿ ಎಂಬ ಹ್ಯಾಶ್‍ಟ್ಯಾಗ್ ಹಾಕಿದ್ದಾರೆ. ರಣದೀಪ್ ಸುರ್ಜೆವಾಲಾ ಮಾತಾಡಿ, ಮೋದಿ ಸರ್ಕಾರ (Modi Government) ದೊಡ್ಡ ದೇವಸ್ಥಾನದ ಮೇಲೆ ದಾಳಿಗೆ ಮುಂದಾಗಿದೆ. ಇದನ್ನು ಖಂಡಿಸ್ತೇವೆ ಎಂದಿದ್ದಾರೆ.
Advertisement
ರಾಮಮಂದಿರ (RamaMandira) ದ ಚಂದಾ ಹಣವನ್ನು ಬಿಜೆಪಿ ಲೂಟಿ ಮಾಡಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಮಧ್ಯೆ ರಾಮನಗರದಲ್ಲಿ ಸಿಎಂ ಬೊಮ್ಮಾಯಿ ರಾಮಜಪ ಮಾಡಿದ್ದಾರೆ. ರಾಮರಾಜ್ಯ ನಿರ್ಮಾಣ ನಮ್ಮ ಕನಸು ಎಂದು ಪ್ರತಿಪಾದಿಸಿದ್ದಾರೆ.