ಮಂಗಳೂರು: ಸುರತ್ಕಲ್ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿದೆ.
ಸದ್ಯ ಪ್ರಕರಣ ಸಂಬಂಧ ರೌಡಿಶೀಟರ್ ಸುಹಾಸ್ ಸೇರಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಫಾಝಿಲ್ ಹತ್ಯೆಯ ರೂವಾರಿಯೇ ರೌಡಿಶೀಟರ್ ಸುಹಾಸ್ ಆಗಿದ್ದು, ಕೊಲೆ ಹೇಗೆ ಮಾಡ್ಬೇಕು..? ಕೊಲೆ ನಂತರ ಹೇಗೆ ಎಸ್ಕೇಪ್ ಆಗ್ಬೇಕು..?, ಪ್ರತಿಯೊಂದನ್ನೂ ಹೇಳುವ ಮೂಲಕ ಪ್ಲಾನ್ ರೂಪಿಸಿದ್ದ ಎಂಬುದಾಗಿ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಂದು ಬೆಂಗಳೂರಿನಲ್ಲಿ ಬಚ್ಚಿಟ್ಟುಕೊಂಡಿದ್ದ ಹಂತಕರು..!
Advertisement
Advertisement
ಫಾಝಿಲ್ ಹತ್ಯೆಯ ವೇಳೆ ಡ್ರೈವರ್ ಕಾರನಲ್ಲೇ ಇರಬೇಕು. ಹತ್ಯೆ ಮುಗಿಸಿ ಬಂದ ನಂತರ ಕಾರ್ ಹತ್ತಿ ಪರಾರಿಯಾಗಬೇಕು. ಅಲ್ಲದೆ ಪರಾರಿಯಾಗುವ ರಸ್ತೆಯ ಮಾರ್ಗ ಕೂಡ ಬದಲಿಸುವಂತೆ ಸುಹಾಸ್ ಹೇಳಿದ್ದ. ಸುಹಾಸ್ ಹೇಳಿದಂತೆ ಹಂತಕರು ಸುರತ್ಕಲ್ ಮಾರ್ಗದಿಂದ ಬಂಟ್ವಾಳಕ್ಕೆ ತೆರಳಿ, ಬಂಟ್ವಾಳದ ವಿಟ್ಠಲನಗರದವರೆಗೂ ಹೋಗಿದ್ದರು. ಬಳಿಕ ಅಲ್ಲಿಂದ ಉಡುಪಿಗೆ ಹೋಗಿದ್ದಾರೆ. ಉಡುಪಿಯ ಪ್ರಮುಖ ಗ್ರಾಮಗಳಲ್ಲಿ ಓಡಾಡಿದ್ದರು. ಇತ್ತ ಶನಿವಾರ ರಾತ್ರಿ ಅಜಿತ್ ಬಂಧನವಾಗಿದ್ದ ಮಾಹಿತಿ ತಿಳಿಯುತ್ತಿದ್ದಂತೆಯೇ ಮತ್ತೆ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಅನ್ನೋ ಅಂಶವೊಂದು ಬಯಲಾಗಿದೆ. ಇದನ್ನೂ ಓದಿ: 23 ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಅಧಿಕಾರದ ಮಹಲು ಕಟ್ಟಿದ್ದೀರಿ: BJP ಸರ್ಕಾರದ ವಿರುದ್ಧ ಸೂಲಿಬೆಲೆ ಕಿಡಿ
Advertisement
Advertisement
ಇತ್ತ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಹತ್ಯೆಗೆ ಬಳಸಲಾದ ಕಾರು ಪತ್ತೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಇಂದು ಕಾರು ಪರಿಶೀಲನೆಗೆ ಆಗಮಿಸಿದರು. ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳು ಕಾರಿನ ಮಹಜರು ನಡೆಸಿ ತೆರಳಿದ್ದಾರೆ. ವಾಹನದ ಸ್ಟೇರಿಂಗ್ ಮತ್ತು ಹ್ಯಾಂಡ್ ಬ್ರೇಕ್ ಮೇಲೆ ಇರುವ ಬೆರಳಚ್ಚು ಪತ್ತೆ ಮಾಡಲಿರುವ ಪೊಲೀಸರು, ಕಾರಿನಲ್ಲಿರುವ ಸಿಮ್ ಕಾರ್ಡ್ ಬಗ್ಗೆ ಇಂದು ತಪಾಸಣೆ ನಡೆಸಲಿದ್ದಾರೆ. ಇನ್ನು ಎರಡು ದಿನದಿಂದ ಇನ್ನಾದ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಕಾರನ್ನು ಇಂದು ಸುರತ್ಕಲ್ ಪೊಲೀಸರು ಟೋಯಿಂಗ್ ವಾಹನ ಬಳಸಿ ತೆರವು ಮಾಡಿದ್ದಾರೆ.