ಮಂಡ್ಯ: ನಮ್ಮ ಮಗನನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಮದುವೆ ಮಾಡಲು ಹೊರಟಿದ್ದಾರೆ ಎಂದು ಪೋಷಕರು ಪೊಲೀಸ್ ಠಾಣೆ ಮಟ್ಟಿಲೇರಿರೋ ವಿಚಿತ್ರವಾದ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ ಕೆ.ಶ್ರೀನಿವಾಸ್ ಎಂಬವರ ಮಗ ಚಂದನ್ ಮುಸ್ಲಿಂ ಧರ್ಮದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದ್ರಿಂದ ಹುಡುಗಿ ಮನೆಯವವರು ಚಂದನ್‍ನನ್ನ ಅಪಹರಿಸಿ ಮುಂಜಿ ಮಾಡವ ಮೂಲಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ಯುವಕನ ತಂದೆ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ.
ಯೂಸಫ್ ಅನ್ನೋ ವ್ಯಕ್ತಿ ತನ್ನ ಮಗಳ ಪ್ರೀತಿ ವಿಚಾರ ಇಟ್ಟುಕೊಂಡು ನನ್ನ ಮಗನಿಗೆ ಬಲವಂತವಾಗಿ ಮುಂಜಿ ಮಾಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಲು ಹೊರಟಿದ್ದಾರೆ. ನನ್ನ ಮಗನಿಗಿನ್ನೂ 19 ವರ್ಷ. ಕಾನೂನಿನ ಪ್ರಕಾರ ಆತನಿಗೆ ಮದುವೆ ಮಾಡಲು ಸಾಧ್ಯವಿಲ್ಲ. ಆದ್ರೂ ಕೂಡ ಇದನ್ನು ಲೆಕ್ಕಿಸದೆ ನನ್ನ ಮಗನನ್ನು ಅಪಹರಿಸಿದ್ದಾರೆ. ಆದ್ದರಿಂದ ನನ್ನ ಮಗನನ್ನ ರಕ್ಷಿಸಿ ಎಂದು ಚಂದನ್ ತಂದೆ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ