ಮಂಗಳೂರು: ಸಿಬ್ಬಂದಿ ಮೇಲಿನ ಕೋಪಕ್ಕೆ ತಂದೆಯೊಬ್ಬ ಮಗನ ಮೇಲೆ ಗುಂಡು ಹಾರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಮಾರ್ಗನ್ಸ್ ಗೇಟ್ ನಲ್ಲಿ ಶೂಟೌಟ್ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿದೆ. ಈ ಘಟನೆ ಮಂಗಳೂರಿನ ಮೊರ್ಗನ್ಸ್ ಗೇಟ್ ಬಳಿಯ ವೈಷ್ಣವಿ ಕಾರ್ಗೋ ಸಂಸ್ಥೆಯಲ್ಲಿ ನಡೆದಿದ್ದು, ಸೆರೆಯಾದ ದೃಶ್ಯವಳಿಗಳ ಪ್ರಕಾರ ಸಿಬ್ಬಂದಿ ಮೇಲಿನ ಕೋಪಕ್ಕೆ ತಂದೆಯೇ ಮಗನ ಮೇಲೆ ಗುಂಡು ಹಾರಿಸಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಶಾಖೆಗೆ ಬಂದು ಸಂಘದ ಶಿಕ್ಷಣ ಪಡೆಯಿರಿ, ನಿಮಗೂ ಒಳ್ಳೆಯದು – ಹೆಚ್ಡಿಕೆಗೆ ಕಟೀಲ್ ಸಲಹೆ
Advertisement
Advertisement
ವೇತನದ ವಿಚಾರಕ್ಕೆ ನಿನ್ನೆ ಮಾಲೀಕ ರಾಜೇಶ್ ಪ್ರಭು ಬಳಿ ಚಂದ್ರು ಮತ್ತು ಅಶ್ರಫ್ ಎಂಬ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ರಾಜೇಶ್ ಪುತ್ರ ಸುಧೀಂದ್ರ ಪ್ರಭು ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದಾರೆ. ಸುಧೀಂದ್ರ ಪ್ರಭು ಮತ್ತು ಇಬ್ಬರು ಸಿಬ್ಬಂದಿ ಮಧ್ಯೆ ಕಚೇರಿ ಹೊರಗೆ ಹೊಡೆದಾಟ ನಡೆದಿದೆ. ಆಗ ರಾಜೇಶ್ ಕಚೇರಿ ಒಳಗಿಂದ ತನ್ನ ಲೈಸೆನ್ಸ್ ರಿವಾಲ್ವರ್ ಹಿಡಿದು ಹೊರಬಂದರು. ರಿವಾಲ್ವರ್ ಹಿಡಿದು ಸಿಬ್ಬಂದಿ ಮೇಲೆ ಕೈ ಹಾಕಿ ಪರಸ್ಪರ ಹೊಡೆದಾಟ ನಡೆಸಿದರು.
Advertisement
ಈ ವೇಳೆ ಅಚಾನಕ್ ಆಗಿ ಕೈಯ್ಯಲ್ಲಿದ್ದ ರಿವಾಲ್ವರ್ ನಿಂದ ಹಾರಿದ ಗುಂಡು ಮಗ ಸುಧೀಂದ್ರ ತಲೆ ಭಾಗಕ್ಕೆ ಬಿದ್ದು, ಗಂಭೀರ ಗಾಯವಾಗಿದೆ. ಈ ಎಲ್ಲ ದೃಶ್ಯಾವಳಿಗಳು ಕಚೇರಿ ಹೊರಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ವಿಚಾರಣೆ ವೇಳೆಯೂ ರಾಜೇಶ್ ಪ್ರಭು ಸತ್ಯವನ್ನು ಬಾಯ್ಬಿಟ್ಟಿದ್ದರು. ಸದ್ಯ ಸುಧೀಂದ್ರ ಗಂಭೀರ ಸ್ಥಿತಿಯಲ್ಲಿದ್ದು, ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ. ಇದನ್ನೂ ಓದಿ: 5ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ- ಶಿಕ್ಷಕ ಅರೆಸ್ಟ್
Advertisement
ಪಂದೆಶ್ವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.