ಕೋಲಾರ : ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗನನ್ನು (Boy) ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.
ಭುವನ್ (8) ಕೊಲೆಯಾದ ಬಾಲಕ ಹಾಗೂ ಸುಬ್ರಹ್ಮಣ್ಯಂ ಎಂಬಾತ ಕೊಲೆಗೈದ ಆರೋಪಿ. ಈತ 5 ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ. ಆದರೆ ಸೋಮವಾರ ಬೆಂಗಳೂರಿನಿಂದ (Bengaluru) ಬಂದ ಸುಬ್ರಹ್ಮಣ್ಯಂ ಮಧ್ಯಾಹ್ನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಗ ಭುವನ್ ಅನ್ನು ಕರೆದುಕೊಂಡು ಬಂದಿದ್ದಾನೆ. ಶಾಲೆಯಿಂದ ಕರೆತಂದ ಸುಬ್ರಹ್ಮಣ್ಯಂ ಕೋಲಾರದ ಗದ್ದೆಕಣ್ಣೂರು ಬಳಿ ಕರೆದುಕೊಂಡು ಬಂದು ಭೀಕ್ಷೆ ಬೇಡಲು ಬಿಟ್ಟಿದ್ದ. ಶಾಲೆಯ ಸಮವಸ್ತ್ರ ಧರಿಸಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
Advertisement
Advertisement
ಸ್ಥಳಕ್ಕೆ ಬಂದ ಪೊಲೀಸರು ಭುವನ್ ಅನ್ನು ವಿಚಾರಿಸಿದಾಗ ನಂಗಲಿ ಗ್ರಾಮದಲ್ಲಿ ಅಜ್ಜಿ ಮನೆಯಲ್ಲಿದ್ದು ತಂದೆ ಇಲ್ಲಿಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಆದರೆ ಯಾವುದಕ್ಕೂ ಇರಲಿ ಎಂದು ಅಜ್ಜಿಯನ್ನು ಕರೆಸಿ ವಿಚಾರಣೆ ನಡೆಸಿದ ಪೊಲೀಸರು ಮಗುವಿನ ಒಪ್ಪಿಗೆಯಂತೆ ಅಜ್ಜಿಯ ಜೊತೆಗೆ ಕಳಿಸಿ, ತಂದೆ ಸುಬ್ರಹ್ಮಣ್ಯಂನನ್ನು ಬೆಂಗಳೂರಿಗೆ ಹೋಗಲು ತಿಳಿಸಿದ್ದಾರೆ. ಆದರೆ ಬೆಂಗಳೂರಿಗೆ ಹೋಗದ ಸುಬ್ರಮಣ್ಯಂ ಅಜ್ಜಿ ಮನೆಗೆ ಬರುವ ಮೊದಲೇ ಮಗನನ್ನು ಮನೆಗೆ ಬಿಡುವುದಾಗಿ ಕರೆದುಕೊಂಡು ಹೋಗಿ ಮನೆಯಲ್ಲೇ ಮಗುವನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.
Advertisement
ಇನ್ನೂ ಕಳೆದ 8 ವರ್ಷದ ಹಿಂದೆ ಶ್ರೀನಿವಾಸಪುರ ತಾಲೂಕಿನ ಕತ್ತಿಬಿಸೇನಹಳ್ಳಿ ಗ್ರಾಮದ ಸುಮಾ ಎನ್ನುವವರನ್ನು ಮುಳಬಾಗಲು ತಾಲೂಕಿನ ಪಟ್ರಹಳ್ಳಿ ಗ್ರಾಮದ ಸುಬ್ರಹ್ಮಣ್ಯಂ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಟೈಲ್ಸ್ ಮತ್ತು ಗಾರೆ ಕೆಲಸ ಮಾಡುತ್ತಿದ್ದ ಸುಬ್ರಮಣ್ಯಂ ಅನೇಕಲ್‌ನಲ್ಲಿ ವಾಸವಾಗಿದ್ದ. 5 ವರ್ಷಗಳ ಕಾಲ ಚೆನ್ನಾಗಿದ್ದ ಸುಬ್ರಮಣ್ಯಂ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡು ಮನೆಯಲ್ಲಿ ಆಗಾಗ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದ. ಕಳೆದ 5 ವರ್ಷದ ಹಿಂದೆ ಆನೇಕಲ್ ಮನೆಯಲ್ಲಿ ಹೆಂಡತಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದು, ಇದರ ಬಗ್ಗೆ ಪತಿಯ ಸಂಬಂಧಿಕರು ದೂರಿನನ್ವಯ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ
Advertisement
ಈ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗುವನ್ನು ಸುಮಾನ ಸಂಬಂಧಿಕರು ತಮ್ಮ ಮನೆಗೆ ಕರೆದುಕೊಂಡು ಬಂದು ಸಾಕುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಸುಬ್ರಹ್ಮಣ್ಯಂ ಜೈಲಿನಿಂದ ಹೊರಬಂದ ಮೇಲೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು. ಇನ್ನು ಸುಮಾ ಸಂಬಂಧಿಕರ ಮನೆಯಲ್ಲಿದ್ದ ಭುವನ್‌ನನ್ನು ನಾನೇ ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಕರೆದುಕೊಂಡು ಬಂದು ತನ್ನ ತಾಯಿ ಸುಬ್ಬಲಕ್ಷ್ಮೀ ಜೊತೆ ನಂಗಲಿಯಲ್ಲಿ ಬಾಡಿಗೆ ಮನೆಯಲ್ಲಿ ಬಿಟ್ಟಿದ್ದ. ಆದ್ರೆ ನಿನ್ನೆ ರಾತ್ರಿ ತನ್ನ ಮಗುವನ್ನು ಕೊಂದು ತಾಯಿ ಮೇಲೆ ಸಹ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂಬಂಧ ಆರೋಪಿಯನ್ನು ನಂಗಲಿ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ