ಮುಂಬೈ: ಒಂದೇ ಕುಟುಂಬದ ನಾಲ್ವರು ಇಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದ್ದು, ತಂದೆ ಹಾಗೂ ಮಗಳು ಸಾವನ್ನಪ್ಪಿದ್ದಾರೆ.
ಮನೀಷ್(30) ಹಾಗೂ ಪುತ್ರಿ ಪ್ರಗತಿ (7) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಅಲ್ಲದೇ ಪತ್ನಿ ಪಿಂಕಿ(28) ಹಾಗೂ ಮಗಳು ಪ್ರತಿಕ್ಷಾ(3) ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಇಂದು ಬೆಳಗ್ಗೆ 5.30ರ ಸುಮಾರಿಗೆ ಈ ಘಟನೆ ಜರುಗಿದೆ. ಮೃತ ಮನೀಷ್ ನಲಸೋಪಾರದಲ್ಲಿ ವಾಸವಾಗಿದ್ದು ಆತನ ಮನೆಯ ಸಮೀಪವೇ ಪೋಷಕರು ವಾಸವಾಗಿದ್ದರು. ಇಂದು ಬೆಳಗ್ಗೆ ತಂದೆ ಬಹಿರ್ದೆಸೆಗೆಂದು ಹೊರ ಬಂದಾಗ ಮನೀಷ್, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಚೀರಾಟ ಕೇಳಿಸಿದೆ. ಕೂಡಲೇ ಮನೆಗೆ ಬಂದಾಗ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಕಂಡುಬಂದಿದೆ.
Advertisement
ಕೂಡಲೇ ನಾಲ್ವರನ್ನು ಸ್ಥಳೀಯ ವಾಸಯಿ ವಿರಾರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕತ್ಸೆ ಫಲಕಾರಿಯಾಗದೆ ಮನೀಷ್ ಹಾಗೂ ಪುತ್ರಿ ಪ್ರಗತಿ ಮೃತಪಟ್ಟಿದ್ದಾರೆ. ಪತ್ನಿ ಪಿಂಕಿ(28) ಹಾಗೂ ಮಗಳು ಪ್ರತಿಕ್ಷಾ(3) ಅಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಮೃತ ಮನೀಷ್ ಕಾರ್ ಬ್ರೋಕರ್ ಉದ್ಯೋಗ ಮಾಡಿಕೊಂಡಿದ್ದು, ಕೆಲ ದಿನಗಳಿಂದ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಈ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಂಬಂಧಿಕ ಭೋನು ಸಿಂಗ್ ಶಂಕೆ ವ್ಯಕ್ತಪಡಿಸಿದ್ದಾರೆ.
Advertisement
ನಲಸೋಪರಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ವ್ಯಕ್ತಿಯ ಪತ್ನಿಯ ಆರೋಗ್ಯ ಚೇತರಿಕೆ ಕಂಡ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಎಸಿಪಿ ದತ್ತ ತೊಲೆವರ್ ತಿಳಿಸಿದ್ದಾರೆ.