ಕಾರವಾರ: ಹೆಣ್ಣು ಎಂದಾಕ್ಷಣ ಸಮಾಜದಲ್ಲಿ ಅವರಿಗೆ ನೀಡುವ ಸ್ಥಾನಮಾನಗಳೇ ಬೇರೆ ಇರುತ್ತದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಅವರಿಗೆ ಹಲವು ಕಾರ್ಯಗಳಿಗೆ ಇಂದಿಗೂ ಭಾಗವಹಿಸುವ ಅವಕಾಶಗಳಿಲ್ಲ. ಅದರಲ್ಲಿಯೂ ಶ್ರಾದ್ಧ ಕಾರ್ಯಗಳಲ್ಲಿ ಇಂದಿನವರೆಗೂ ಮಹಿಳೆಗೆ ಕಾರ್ಯ ಮಾಡುವ ಹಕ್ಕು ಧಾರ್ಮಿಕವಾಗಿ ಇಲ್ಲ. ಇದೀಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಹಿಳೆಯೊಬ್ಬರು ಹಳೆಯ ಸಂಪ್ರದಾಯವನ್ನು ಮುರಿದು ತಮ್ಮ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಕಾರವಾರ ತಾಲೂಕಿನ ಮುಡಗೇರಿಯ ಪ್ರತಿಭಾ ನಾಯ್ಕ ಎಂಬುವವರು ಇಂದು ಮೃತರಾದ ತಮ್ಮ ತಂದೆ ರಮೇಶ್ ನಾಯ್ಕರ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ. ಹಿಂದೂ ಧರ್ಮದ ಪ್ರಕಾರ ಮರಣ ಹೊಂದಿದಾಗ ಗಂಡು ಮಕ್ಕಳು ಚಿತೆಗೆ ಅಗ್ನಿಸ್ಪರ್ಶ ಮಾಡುವುದು ನಡೆದು ಬಂದ ಸಂಪ್ರದಾಯ. ರಮೇಶ್ ನಾಯ್ಕ ಅವರಿಗೆ ಪ್ರತಿಭಾ ಏಕೈಕ ಪುತ್ರಿಯಾಗಿದ್ದು ವಿಧಿವಶರಾದ ಅವರ ಚಿತೆಗೆ ಪುತ್ರಿಯೇ ಅಂತ್ಯಸಂಸ್ಕಾರ ಮಾಡಿದ್ದಾರೆ. ಇದನ್ನೂ ಓದಿ: ಸಚಿವರ ಕಾರು ಅಪಘಾತ – ಗಾಯಗೊಂಡ ಬೈಕ್ ಸವಾರನ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ
ಹಳೆಯ ಕಟ್ಟುಪಾಡಿನ ಪ್ರಕಾರ ಗಂಡು ಮಕ್ಕಳಿಲ್ಲದಿದ್ದರೆ ದೊಡ್ಡಪ್ಪ, ಚಿಕ್ಕಪ್ಪನ ಗಂಡು ಮಕ್ಕಳು ಚಿತೆಗೆ ಅಗ್ನಿ ಸ್ಪರ್ಶ ಮಾಡಬಹುದು ಎಂಬ ವಾಡಿಕೆ ಇದೆ. ಆದರೆ ಇಲ್ಲಿ ಪ್ರತಿಭಾ ನಾಯ್ಕ ತಂದೆಯ ಅಂತ್ಯ ಸಂಸ್ಕಾರವನ್ನು ತಾನೇ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡಬೇಕು – ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್