Bengaluru CityKarnatakaLatestMain Post

ಸಚಿವರ ಕಾರು ಅಪಘಾತ – ಗಾಯಗೊಂಡ ಬೈಕ್ ಸವಾರನ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ

ಬೆಂಗಳೂರು: ನಗರದ ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು-ಬೆಂಗಳೂರು ಮಾರ್ಗಮಧ್ಯೆ, ಸಚಿವ ಗೋವಿಂದ ಕಾರಜೋಳ ಅವರ ಕಾರು ಅಪಘಾತವಾಗಿದ್ದು ಕಾರು, ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಸಚಿವರ ಕಾರು ಅಪಘಾತ - ಗಾಯಗೊಂಡ ಬೈಕ್ ಸವಾರನ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ

ನೆಲಮಂಗಲ ತಾಲೂಕಿನ ಮಹಿಮಾಪುರ ಗೇಟ್ ಬಳಿ ಅಪಘಾತವಾಗಿದ್ದು, ಸಚಿವರ ಕಾರು, ಬೈಕ್‍ಗೆ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳುವನ್ನು ತಾಳೆಕೆರೆ ಪಾಳ್ಯ ನಿವಾಸಿ ಕೃಷ್ಣ ಮೂರ್ತಿ(45) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡಬೇಕು – ರಮೇಶ್‍ಗೆ ಹೆಬ್ಬಾಳ್ಕರ್ ಟಾಂಗ್

ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಬರುವ ವೇಳೆ ಕಾರಿಗೆ ಅಡ್ಡಲಾಗಿ ಬೈಕ್ ಬಂದಾಗ ಅಪಘಾತವಾಗಿದೆ. ಗಾಯಳು ಕೃಷ್ಣ ಮೂರ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನೆಲಮಂಗಲ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವರ ಕಾರು ಅಪಘಾತ - ಗಾಯಗೊಂಡ ಬೈಕ್ ಸವಾರನ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ

ಸರ್ಕಾರಿ ಆಸ್ಪತ್ರೆಗೆ ಸಚಿವರ ಭೇಟಿ:
ಅಪಘಾತದ ನಂತರ ಕಾರಜೋಳ, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರೋಗಿಯ ಆರೋಗ್ಯ ವಿಚಾರಿಸಲು ಬಂದು ಮಾನವೀಯತೆ ಮೆರೆದರು, ಆದರೆ ಗಾಯಾಳು ಖಾಸಗಿ ಆಸ್ಪತ್ರೆಗೆ ರವಾನೆಯಾಗಿದ್ದರು, ಸರ್ಕಾರಿ ಆಸ್ಪತ್ರೆಗೆ ಬಂದ ಸಚಿವರು ನಂತರ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಬಗ್ಗೆ ವೈದ್ಯರ ಜೊತೆ ಚರ್ಚೆ ನಡೆಸಿ ಗಾಯಾಳುವಿನ ಆರೋಗ್ಯ ವಿಚಾರಿಸಿ ಆತನ ಖರ್ಚು ವ್ಯೆಚ್ಚವನ್ನು ಬರಿಸುವುದಾಗಿ ತಿಳಿಸಿದರು. ಗಾಯಾಳು ಮದ್ಯಪಾನ ಮಾಡಿ ಬೈಕ್ ಚಲಾಯಿಸಿರುವುದು ಸಾಭೀತಾಗಿದೆ, ಆತ ಕೂಡ ಒಪ್ಪಿಕೊಂಡಿದ್ದು, ಕಾರಜೋಳ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆಯಾಗದಂತೆ ಮನವರಿಕೆ ಮಾಡಿಕೊಟ್ಟು ನಂತರ ಖಾಸಗಿ ವಾಹನದಲ್ಲಿ ಬೆಂಗಳೂರು ಕಡೆ ತೆರಳಿದರು. ಇದನ್ನೂ ಓದಿ: ಹಂಪಿ ವಿಶ್ವ ವಿದ್ಯಾಲಯದ ಹಗರಣ ಕುರಿತು ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ

Related Articles

Leave a Reply

Your email address will not be published. Required fields are marked *