ತಿರುವನಂತಪುರಂ: ತೀವ್ರ ಜ್ವರದಿಂದ ಬಳಲುತ್ತಿದ್ದ 11 ವರ್ಷದ ಬಾಲಕಿ ಅಪ್ಪನ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಈ ಸಂಬಂಧಬಾಲಕಿ ಫಾತಿಮಾಳ ಅಪ್ಪ ಸತ್ತಾರ್ ಹಾಗೂ ಸಲಹೆ ನೀಡಿದ ಮುಸ್ಲಿಂ ಧರ್ಮದ ಮಖಂಡ ಮೊಹಮ್ಮದ್ ಉವೈಸ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು
ಹಿನ್ನೆಲೆ: ಬಾಲಕಿ ಫಾತೀಮಾ ತೀವ್ರ ಜ್ವರದಿಂದ ಬಳಲುತ್ತಿದ್ದಳು ಆಕೆಯ ಮೇಲೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ ಎಂದು ಮೊಹ್ಮದ್ ಉವೈಸ್ ಹೇಳಿದ್ದಾರೆ. ಇವರು ಮುಸ್ಲಿಂ ಧರ್ಮದ ಮುಖಂಡ ಆಗಿದ್ದು, ಬಾಲಕಿಯ ಅಪ್ಪ ಅವರ ಬಳಿ ಕರೆದುಕೊಂಡು ಹೋಗಿದ್ದರು. ಆಕೆಗೆ ಪವಿತ್ರ ಎನಿಸುವ ನೀರು ಕುಡಿಸಿ ಅವರ ಎದುರಿಗೆ ಕುರಾನ್ ಓದಿದರೆ ಮಗಳು ಆರೋಗ್ಯವಾಗುತ್ತಾಳೆ ಎಂದು ಸಲಹೆ ನೀಡಿಲಾಗಿದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು
ಬಾಲಕಿ ಪರಿಸ್ಥಿತಿ ಬಿಗಡಾಯಿಸಿತ್ತು. ಇಂಥ ಪರಿಸ್ಥಿತಿಯಲ್ಲಿಯೂ ಆಕೆಯ ಅಪ್ಪ ಮುಖಂಡ ಹೇಳಿದಂತೆ ನೀರು ಕುಡಿಸಿ ಕುರಾನ್ ಓದತೊಡಗಿದ್ದಾನೆ. ಇಷ್ಟಾಗುತ್ತಲೇ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಲ್ಲಿ ದೂರು ನೀಡಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರೂ ಬಾಲಕಿ ಅಪ್ಪ ಕೇಳಿಲ್ಲ ಎಂದು ನೆರೆಯವರು ಹೇಳಿದ್ದಾರೆ. ಈ ಹೆನ್ನೆಲೆಯಲ್ಲಿ ಧರ್ಮದ ಮುಖಂಡ ಹಾಗೂ ಬಾಲಕಿಯ ಅಪ್ಪ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ತೀತ್ರ ಉಸಿರಾಟ ತೊಂದರೆಯಿಂದ ಬಳಲುತ್ತದ್ದದ್ದು ತಿಳಿದುಬಂದಿದೆ. ಸಾಯುವಂಥ ರೋಗ ಆಗಿರಲಿಲ್ಲ. ಬಾಲಕಿಗೆ ಸರಿಯಾದ ಚಿಕಿತ್ಸೆ ದೊರೆತಿದ್ದರೆ ಬದುಕುಳಿಯುತ್ತಿದ್ದಳು ಎಂದು ವೈದ್ಯರು ಹೇಳಿದ್ದಾರೆ.