ತಂದೆ, ಸಹೋದರನಿಂದಲೇ 9 ವರ್ಷ ನಿರಂತರ ಅತ್ಯಾಚಾರ- ತಾಯಿಂದ್ಲೇ ಮಗಳಿಗೆ 8 ಬಾರಿ ಗರ್ಭಪಾತ..!

Public TV
2 Min Read
rape

ಲಕ್ನೋ: ಮಾಂತ್ರಿಕನ ಮಾತು ಕೇಳಿ ತಂದೆಯೇ ಮಗಳ ಮೇಲೆ 9 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಧೈರ್ಯವಾಗಿ ತನ್ನ ಅಣ್ಣ ಬಳಿ ಹೇಳಿಕೊಂಡ ಬಳಿಕ ಆತನೂ ಕೂಡ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ತಾಯಿಯೇ 8 ಬಾರಿ ಗರ್ಭಪಾತ ಮಾಡಿಸಿರುವ ಆಘಾತಕಾರಿ ಘಟನೆ ಲಕ್ನೋದ ಅಲಂಬಾಗ್ ಪ್ರದೇಶದಲ್ಲಿ ನಡೆದಿದೆ.

ಸಂತ್ರಸ್ಥೆ ಹೇಳಿಕೆ ನೀಡಿರುವ ಪ್ರಕಾರ, ಆಕೆಯ ಮೇಲೆ ಸತತವಾಗಿ 9 ವರ್ಷಗಳಿಂದ ಅತ್ಯಾಚಾರ ನಡೆದಿದ್ದು, ಈ ಅವಧಿಯಲ್ಲಿ ತನಗೆ 8 ಬಾರಿ ತನ್ನ ತಾಯಿಯೇ ಗರ್ಭಪಾತ ಮಾಡಿಸಿದ್ದಾಳೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ತಂದೆ, ತಾಯಿ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

Gang rape India

ಏನಿದು ಘಟನೆ?
ಸಂತ್ರಸ್ತೆ ತನ್ನ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದರು. ನಂತರ ಆಕೆ ತಂದೆ ತಾಯಿಯೊಂದಿಗೆ ವಾಸಿಸುತ್ತಿದ್ದರು. ಈ ವೇಳೆ ಪದೇ ಪದೇ ತಂದೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದನು. ಇದರಿಂದ ಆತ ವೈದ್ಯರ ಬಳಿ ಚಿಕಿತ್ಸೆ ಪಡೆಯದೇ ನೇರವಾಗಿ ಮಾಂತ್ರಿಕನ ಬಳಿ ಅನಾರೋಗ್ಯಕ್ಕೆ ಕಾರಣ ಕೇಳಿದ್ದಾನೆ. ಈ ವೇಳೆ ಮಾಂತ್ರಿಕ ನೀನು ಬದುಕಬೇಕಾದರೆ ನಿನ್ನ ಮಗಳ ಮೇಲೆ ಅತ್ಯಾಚಾರ ಮಾಡಬೇಕು ಎಂದು ತಿಳಿಸಿದ್ದಾನೆ.

rape 13
ಇದರಂತೆ ತಂದೆಯೇ ಮಗಳ ಮೇಲೆ ಪ್ರತಿದಿನ ಅತ್ಯಾಚಾರ ಮಾಡುತ್ತಿದ್ದ. ಮಗಳು ಇದನ್ನು ನಿರಾಕರಿಸಿದ್ದಕ್ಕೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಇದನ್ನು ಸಹಿಸಲಾಗದೇ ಆಕೆ ತನ್ನ ಸಹೋದರನಿಗೆ ಹೇಳಿಕೊಂಡಿದ್ದಾರೆ. ಆಘಾತಕಾರಿ ವಿಷಯವೆಂದರೆ ತಂದೆಗೆ ಬುದ್ಧಿ ಹೇಳಬೇಕಾದವನೇ ತಂಗಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ತಂದೆ ಮತ್ತು ಸಹೋದರ ಮಾಡಿದ ಹೀನ ಕೃತ್ಯವನ್ನು ತಾಯಿಗೆ ತಿಳಿಸಿದ್ದಾರೆ. ಆದರೆ ತಾಯಿ ಕೂಡ ಅವರ ಜೊತೆ ಸಹಕರಿಸು ಎಂದು ಹೇಳಿ 9 ವರ್ಷದಲ್ಲಿ 8 ಬಾರಿ ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದಾಳೆ.

rape1

ಕೊನೆಗೆ ಸಂತ್ರಸ್ತೆ ಯಾವುದೋ ನೆಪ ಹೇಳಿ ಮನೆಯಿಂದ ಹೊರ ಬಂದು ಅಲ್ಲಿನ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ಅಂತೆಯೇ ಸಿಎಂ ತಕ್ಷಣ ತನಿಖೆ ಮಾಡುವಂತೆ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸದ್ಯ ಸಂತ್ರಸ್ತೆ ಎನ್‍ಜಿಓ ನೆರವಿನಿಂದ ಬ್ಯೂಟಿಷಿಯನ್ ತರಬೇತಿ ಪಡೆದು, ಬ್ಯೂಟಿ ಪಾರ್ಲರ್ ನಡೆಸಿಕೊಂಡು ಜೀವನ ನಡೆಸುತ್ತಿದ್ದಾರೆ.

rape 3

arrestnew 1 1

Share This Article
Leave a Comment

Leave a Reply

Your email address will not be published. Required fields are marked *