ಕೌಟುಂಬಿಕ ಕಲಹ- 2 ವರ್ಷದ ಹಸುಳೆಯನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ

Public TV
1 Min Read
KOLAR MURDER

ಕೊಲಾರ: ತನ್ನ 2 ವರ್ಷದ ಮಗುವನ್ನು (Child) ಕತ್ತು ಹಿಸುಕಿ ಕೊಲೆಗೈದ ಪ್ರಕರಣ ಮುಳಬಾಗಿಲಿನ ಕೆ.ಬಿ.ಕೊತ್ತೂರು ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಮಗುವನ್ನು ರಮ್ಯಾ (2) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯ ತಂದೆ (Father) ಗಂಗಾಧರನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಸೋಮವಾರ ಸಂಜೆ ತೋಟದ ಬಳಿಗೆ ಹೋಗಿ ಬರುತ್ತೇನೆ ಎಂದು ಗಂಗಾಧರ ಮಗಳನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ರಮ್ಯಾಳನ್ನು ಕತ್ತು ಹಿಸುಕಿ ಸಾಯಿಸಿ ತೋಟದ ಬಳಿಯೇ ಬಿಟ್ಟು ಪರಾರಿಯಾಗಿದ್ದಾನೆ. ರಾತ್ರಿ ಎಷ್ಟು ಸಮಯವಾದರೂ ಮನೆಗೆ ಮರಳಿ ಬಾರದ ಕಾರಣ ತೋಟದ ಬಳಿ ಹೋಗಿ ನೋಡಿದಾಗ ಮಗು ಮೃತಪಟ್ಟಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಗಂಡ ಬೇರೆ ಮನೆಮಾಡದ್ದಕ್ಕೆ ತವರಿಗೆ ಕರೆಸಿ ಅತ್ತೆಯನ್ನೇ ಕೊಂದ ಸೊಸೆ!

ಗಂಗಾಧರ ಮತ್ತು ಆತನ ಪತ್ನಿ ರೇಣುಕಾ ನಡುವೆ ಮನಸ್ಥಾಪವಿತ್ತು. ಇದರಿಂದಾಗಿ 6 ತಿಂಗಳಿಂದ ರೇಣುಕಾ ಗಂಡನನ್ನು ಬಿಟ್ಟು ತವರು ಮನೆಯಲ್ಲಿದ್ದಳು. ಕಳೆದ ಮೂರು ದಿನಗಳ ಹಿಂದೆ ಊರಿನವರು ನ್ಯಾಯ ಪಂಚಾಯಿತಿ ಮಾಡಿ ಗಂಡನೊಂದಿಗೆ ಇರುವಂತೆ ಸೂಚಿಸಿದ್ದರು.

ಸ್ಥಳಕ್ಕೆ ಕೋಲಾರ (Kolar) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ (Nangali Police) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೋದಿ, ಯೋಗಿಯನ್ನು ಹೊಗಳಿದ್ದಕ್ಕೆ ವ್ಯಕ್ತಿ ಹತ್ಯೆಗೈದ ಕ್ಯಾಬ್ ಡ್ರೈವರ್!

Share This Article